ADVERTISEMENT

ಅಪರೂಪದ ವಿಂಟೇಜ್‌ ವಾಹನಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2014, 19:58 IST
Last Updated 23 ನವೆಂಬರ್ 2014, 19:58 IST
ನಗರದ ಜಯಮಹಲ್‌ ಅರಮನೆ ಹೋಟೆಲ್‌ ಮೈದಾನದಲ್ಲಿ ಬೆಂಗಳೂರು ವಿಂಟೇಜ್‌ ಸಮೂಹವು ಭಾನುವಾರ ಆಯೋಜಿಸಿದ್ದ  ವಾಹನ ಪ್ರದರ್ಶನದಲ್ಲಿ ದ್ವಿಚಕ್ರ ವಾಹನಗಳಲ್ಲಿ ಮಕ್ಕಳು ಕುಳಿತು ಸಂಭ್ರಮಿಸಿದರು
ನಗರದ ಜಯಮಹಲ್‌ ಅರಮನೆ ಹೋಟೆಲ್‌ ಮೈದಾನದಲ್ಲಿ ಬೆಂಗಳೂರು ವಿಂಟೇಜ್‌ ಸಮೂಹವು ಭಾನುವಾರ ಆಯೋಜಿಸಿದ್ದ ವಾಹನ ಪ್ರದರ್ಶನದಲ್ಲಿ ದ್ವಿಚಕ್ರ ವಾಹನಗಳಲ್ಲಿ ಮಕ್ಕಳು ಕುಳಿತು ಸಂಭ್ರಮಿಸಿದರು   

ಬೆಂಗಳೂರು: ಬೆಂಗಳೂರು ವಿಂಟೇಜ್‌ ಸಮೂಹವು ಭಾನುವಾರ ನಗರದಲ್ಲಿ ಆಯೋಜಿಸಿದ್ದ ದಕ್ಷಿಣ ಭಾರತ ವಿಂಟೇಜ್‌ ವಾಹನಗಳ ಪ್ರದರ್ಶನದಲ್ಲಿ 1910ರಿಂದ 1980ರವರೆಗಿನ ವಾಹನಗಳು  ಗಮನ ಸೆಳೆದವು.

ನಗರದ ಜಯಮಹಲ್‌ ಅರಮನೆ ಹೋಟೆಲ್‌ ಮೈದಾನದಲ್ಲಿ ಆಯೋಜಿ ಸ­ಲಾಗಿದ್ದ ಈ ಪ್ರದರ್ಶನದಲ್ಲಿ ಕರ್ನಾಟಕ, ಕೇರಳ, ತಮಿಳುನಾಡು ಹಾಗೂ ಆಂಧ್ರಪ್ರದೇಶದಿಂದ ಬಂದಿದ್ದ ವಿಶಿಷ್ಟ, ಅಪರೂಪದ ಹಾಗೂ ವೈವಿಧ್ಯಮಯ ವಿಂಟೇಜ್ ಮತ್ತು ಕ್ಲಾಸಿಕ್ ಕಾರು, ಬೈಕ್‌ ಹಾಗೂ ಸೈಕಲ್‌ ಗಳನ್ನು ಕಣ್ತುಂಬಿ­ಕೊಳ್ಳುವ ಅವಕಾಶ ವಾಹನ ಪ್ರಿಯರಿಗೆ ಲಭಿಸಿತ್ತು.

₨ 1 ಲಕ್ಷ ಮೌಲ್ಯದ ವಿಂಟೇಜ್‌ ರ್‌್ಯಾಲಿ ಬೈಕ್‌ ಆಕರ್ಷಣೆಯಾಗಿತ್ತು. ಈ ರೀತಿಯ ಬೈಕ್‌ಗಳು ಈಗ ವಿಶ್ವ­ದಲ್ಲೇ ವಿರಳ. 1914ರಲ್ಲಿ ತಯಾರಿ­ಸಲಾಗಿದ್ದ ಸನ್‌ ಬೀಮ್‌ ಬೈಕ್‌ ಗಮನ ಸೆಳೆಯಿತು. 1947 ರಲ್ಲಿ ತಯಾರಾದ ಇಟಲಿಯನ್‌ ಲ್ಯಾಂಬ್ರೆಟಾ ಮೇಲೆ ಜನರು ಕುಳಿತು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.