ADVERTISEMENT

ಅರಮನೆ ಅಂದಕ್ಕೆ ಬೆರಗು ರಿಚರ್ಡ್‌

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2015, 20:54 IST
Last Updated 1 ಏಪ್ರಿಲ್ 2015, 20:54 IST
ಮೈಸೂರಿನ ಅರಮನೆಗೆ ಬುಧವಾರ ಭೇಟಿ ನೀಡಿದ್ದ ಅಮೆರಿಕ ರಾಯಭಾರಿ ರಿಚರ್ಡ್‌ ವರ್ಮಾ ಅವರು ದರ್ಬಾರ್‌ ಸಭಾಂಗಣವನ್ನು ಕುತೂಹಲ ದಿಂದ ವೀಕ್ಷಿಸಿದರು. ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್‌. ಸುಬ್ರಹ್ಮಣ್ಯ ಇದ್ದಾರೆ
ಮೈಸೂರಿನ ಅರಮನೆಗೆ ಬುಧವಾರ ಭೇಟಿ ನೀಡಿದ್ದ ಅಮೆರಿಕ ರಾಯಭಾರಿ ರಿಚರ್ಡ್‌ ವರ್ಮಾ ಅವರು ದರ್ಬಾರ್‌ ಸಭಾಂಗಣವನ್ನು ಕುತೂಹಲ ದಿಂದ ವೀಕ್ಷಿಸಿದರು. ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್‌. ಸುಬ್ರಹ್ಮಣ್ಯ ಇದ್ದಾರೆ   

ಮೈಸೂರು: ಅಮೆರಿಕ ರಾಯಭಾರಿ ರಿಚರ್ಡ್‌ ವರ್ಮಾ ಅವರು ಇಲ್ಲಿನ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆಗೆ ಬುಧವಾರ ಭೇಟಿ ನೀಡಿ ಅರಮನೆಯ ಅಂದವನ್ನು ಕಣ್ತುಂಬಿಕೊಂಡರು.

ಬೆಳಿಗ್ಗೆ 9.30 ಗಂಟೆಗೆ ಅರಮನೆಗೆ ಆಗಮಿಸಿದ ಅವರು 11 ಗಂಟೆಯವರೆಗೆ ಕಲ್ಯಾಣ ಮಂಟಪ,  ದರ್ಬಾರ್‌ ಸಭಾಂ
ಗಣ, ತೊಟ್ಟಿಗಳು, ಆಯುಧಗಳು, ವರ್ಣಚಿತ್ರಗಳು ಮೊದಲಾದವನ್ನು ವೀಕ್ಷಿಸಿದರು. ನಂತರ ಅವರು ಅಂಬಾರಿ ಮುಂದೆ ನಿಂತು ಫೋಟೋ ತೆಗೆಸಿಕೊಂಡರು.

ನಂತರ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್‌ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಅವರೊಂದಿಗೆ ಚಹಾ ಸೇವಿಸಿದರು. ಅರಮನೆಯ ವೈಭವದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನೊಮ್ಮೆ ಮೈಸೂರಿಗೆ ಭೇಟಿ ನೀಡಿದಾಗ ಅರಮನೆ ನೋಡಲು ಹೆಚ್ಚು ಸಮಯ ನಿಗದಿಪಡಿಸಿಕೊಳ್ಳುವುದಾಗಿ ಹೇಳಿದರು. ನಂತರ ಅವರು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಅಂಗಸಂಸ್ಥೆಗಳಾದ ವಿವೇಕಾನಂದ ಭಾರತೀಯ ಆಧ್ಯಯನ ಸಂಸ್ಥೆ, ವಿವೇಕಾನಂದ ಇನ್‌ಸ್ಟಿಟ್ಯೂಟ್ ಫಾರ್ ಲೀಡರ್‌ಷಿಪ್ ಡೆವಲಪ್‌ಮೆಂಟ್ (ವಿ–ಲೀಡ್‌) ಮತ್ತು ಗ್ರಾಸ್ ರೂಟ್ ರೀಸರ್ಚ್‌ ಸಂಸ್ಥೆಗೆ ಭೇಟಿ ನೀಡಿದರು.

ವಿ–ಲೀಡ್‌ನಿಂದ ನಡೆಸುವ ತರಬೇತಿ ಶಿಬಿರಗಳು, ಕಾರ್ಯಕ್ರಮಗಳ ಕುರಿತು ಮಾಹಿತಿ ಪಡೆದುಕೊಂಡರು. ಜೆಎಸ್‌ಎಸ್‌ ಅಂಗವಿಕಲರ ಪಾಲಿಟೆಕ್ನಿಕ್‌ಗೆ ತೆರಳಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿದರು. ಪಠ್ಯಕ್ರಮ, ಸೌಲಭ್ಯಗಳು, ಉದ್ಯೋಗಾವಕಾಶ ಕುರಿತು ಮಾಹಿತಿ ಪಡೆದರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಇನ್ಫೋಸಿಸ್‌ ಸಂಸ್ಥೆಗೂ ಭೇಟಿ ನೀಡಿದ್ದರು. ಸಂಜೆ ಬೆಂಗಳೂರಿಗೆ ತೆರಳಿದರು.

ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯ ವಿದ್ಯಾ ಸಂಶೋಧನಾಲಯದ (ಓರಿಯಂಟಲ್‌ ರಿಸರ್ಚ್ ಇನ್‌ಸ್ಟಿಟ್ಯೂಟ್‌) ನವೀಕೃತ ಕಟ್ಟಡವನ್ನು ಅವರು ಮಂಗಳವಾರ ಉದ್ಘಾಟಿಸಿದ್ದರು. ಈ ಕಟ್ಟಡಕ್ಕೆ ನವೀಕರಣಕ್ಕೆ ಅಮೆರಿಕ ರಾಯಭಾರ ಕಚೇರಿ ವತಿಯಿಂದ 50 ಸಾವಿರ ಡಾಲರ್‌ ನೆರವು ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.