ADVERTISEMENT

ಆನಂದ್‌ರಾವ್‌ ಸರ್ಕಲ್‌ ಮೇಲ್ಸೇತುವೆಗೆ ಹೊಸ ರೂಪ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 19:30 IST
Last Updated 21 ಸೆಪ್ಟೆಂಬರ್ 2017, 19:30 IST
ರಂಗುರಂಗಾದ ಆನಂದ್‌ರಾವ್‌ ಸರ್ಕಲ್‌ ಫೈಓವರ್‌
ರಂಗುರಂಗಾದ ಆನಂದ್‌ರಾವ್‌ ಸರ್ಕಲ್‌ ಫೈಓವರ್‌   

ಬೆಂಗಳೂರು: ಬ್ರಿಗೇಡ್‌ ಸಮೂಹವು ಅಗ್ಲಿ ಇಂಡಿಯಾ ತಂಡದ ಜತೆಗೂಡಿ ಆನಂದ್‌ರಾವ್ ಸರ್ಕಲ್‌ನ ಫ್ಲೈಓವರ್‌ನ ಕಂಬಗಳಿಗೆ ಬಣ್ಣ ಬಳಿದು ಹೊಸ ರೂಪ ನೀಡಿದೆ.

ಕಂಬಗಳಿಗೆ ಅಂಟಿಸಿದ್ದ ಭಿತ್ತಿಪತ್ರ, ಸ್ಟಿಕ್ಕರ್‌ಗಳನ್ನು ಖಾಸಗಿ ಕಂಪೆನಿಗಳ ಉದ್ಯೋಗಿಗಳು, ನಿವೃತ್ತ ನೌಕರರು, ವಿದ್ಯಾರ್ಥಿಗಳು, ಹೋಟೆಲ್‌ ಉದ್ಯೋಗಿಗಳನ್ನು ಒಳಗೊಂಡ ಸ್ವಯಂಸೇವಕರು ಕಿತ್ತು ಹಾಕಿದರು. ಬಳಿಕ ನೀಲಿ, ಬಿಳಿ ಬಣ್ಣದಲ್ಲಿ ಚಿತ್ತಾರಗಳನ್ನು ಬಿಡಿಸಿ ಸುಂದರ ತಾಣವನ್ನಾಗಿ ಮಾರ್ಪಡಿಸಿದರು.

ಬ್ರಿಗೇಡ್‌ ಸಮೂಹದ ಉಪಾಧ್ಯಕ್ಷೆ ಪವಿತ್ರಾ ಶಂಕರ್‌, ‘ಕಾರ್ಪೊರೇಟ್ ಕಂಪೆನಿಗಳ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್) ಬ್ರಿಗೇಡ್‌ ಸಮೂಹ ಈ ಕಾರ್ಯಕ್ರಮವನ್ನು ನಡೆಸಿದೆ. ಈ ಸ್ಥಳವನ್ನು ಆಕರ್ಷಕವಾಗಿಸಲು ಉತ್ತಮ ಪೇಂಟಿಂಗ್‌ ಬಳಸಲು ಯೋಜಿಸಿದೆವು. ಹೀಗೆ ಸಣ್ಣ ಸಣ್ಣ ಕೆಲಸಗಳಿಂದಲೇ ನಗರವನ್ನು ಸುಂದರವಾಗಿಸಬಹುದು’ ಎಂದು ಹೇಳಿದರು.

ADVERTISEMENT

ಅಗ್ಲಿ ಇಂಡಿಯಾ ತಂಡದ ಸದಸ್ಯರೊಬ್ಬರು, ‘ರೇಸ್‌ ಕೋರ್ಸ್‌ ಹತ್ತಿರವಿರುವುದರಿಂದ ಮೇಲ್ಸೇತುವೆಯಲ್ಲಿ ಕುದುರೆಯ ಚಿತ್ರವನ್ನು ಬಿಡಿಸಲು ನಿರ್ಧರಿಸಲಾಯಿತು. ಸುತ್ತಲಿನ ಜನರೇ ಸ್ವಯಂಪ್ರೇರಿತರಾಗಿ ಬಂದು ಫ್ಲೈ ಓವರ್‌ ಕೆಳಗಿನ ಪ್ರದೇಶವನ್ನು ಸ್ವಚ್ಛಗೊಳಿಸಿ, ಗಿಡಗಳನ್ನು ನೆಟ್ಟರು. ಅಲ್ಲದೆ, ಕುಳಿತುಕೊಳ್ಳಲು ಆಸನಗಳನ್ನೂ ಹಾಕಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.