ADVERTISEMENT

ಆಲ್ಪೈನ್‌ ಶಾಲೆಯಲ್ಲಿ ‘ಸ್ವಚ್ಛತಾ ಓಟ’

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2014, 19:34 IST
Last Updated 19 ಅಕ್ಟೋಬರ್ 2014, 19:34 IST

ಬೆಂಗಳೂರು: ‘ಸ್ವಚ್ಛ ಭಾರತ ಅಭಿ­ಯಾನ’ದ ಬಗ್ಗೆ ಅರಿವು ಮೂಡಿಸಲು ಇಸ್ರೊ ಬಡಾವಣೆಯ ಆಲ್ಪೈನ್‌ ಶಾಲೆಯು ಭಾನುವಾರ ಹಮ್ಮಿ­ಕೊಂಡಿದ್ದ ‘ಸ್ವಚ್ಛತಾ ಓಟ’ ಕಾರ್ಯ­ಕ್ರಮ­ದಲ್ಲಿ ಸುಮಾರು 500 ಮಂದಿ ಪಾಲ್ಗೊಂಡಿದ್ದರು.

ಬೆಳಿಗ್ಗೆ 7.30ಕ್ಕೆ ಆರಂಭವಾದ ಈ ಕಾರ್ಯಕ್ರಮಕ್ಕೆ ಪಾಲಿಕೆ ಸದಸ್ಯ ಮಂಜುನಾಥ್‌, ಶಾಲೆಯ ಸಂಸ್ಥಾಪಕ ಕಬೀರ್‌ ಹಾಗೂ ಸಬ್‌ಇನ್‌ಸ್ಪೆಕ್ಟರ್‌ ರಾಜು ಚಾಲನೆ ನೀಡಿದರು. ಶಾಲೆಯ ಮುಖ್ಯದ್ವಾರದಲ್ಲಿ ಆರಂಭವಾದ ಓಟವು ಇಸ್ರೊ ಬಡಾವಣೆಯ ಹಾದಿಯ ಮೂಲಕ ಕುಮಾರಸ್ವಾಮಿ ಬಡಾವಣೆಯ ಮಾರ್ಗವಾಗಿ ಸಾಗಿತು.

ಓಟದಲ್ಲಿ ಪಾಲ್ಗೊಂಡಿದ್ದವರು ಹಾದಿಯುದ್ದಕ್ಕೂ ಬಡಾವಣೆಯ ನಿವಾಸಿಗಳಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದರು. ಅರಿವು ಮೂಡಿಸುವುದರ ಜೊತೆಗೆ ಮ್ಯಾರಥಾನ್‌ ಸ್ಪರ್ಧೆಯನ್ನೂ ಆಯೋಜಿಸಲಾಗಿತ್ತು. ಮೊದಲ ಮೂರು ಸ್ಥಾನ ಪಡೆದವರಿಗೆ ಕ್ರಮವಾಗಿ ರೂ 5000, ರೂ 3000 ಹಾಗೂ ರೂ 2000 ನಗದು ಬಹು­ಮಾನ ನೀಡಲಾಯಿತು. ಕಾರ್ಯ­ಕ್ರಮ­ದಲ್ಲಿ ಪಾಲ್ಗೊಂಡವರಿಗೆ ಸಸಿ ವಿತರಿಸಲಾಯಿತು.

ಶಾಲೆಯ ಪ್ರಾಂಶುಪಾಲೆ ಜಯ­ಲಕ್ಷ್ಮೀ ಶಾಸ್ತ್ರಿ, ವಿದ್ಯಾರ್ಥಿಗಳ ಪೋಷ­ಕರು, ಶಾಲಾ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಈ ಕಾರ್ಯ­ಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.