ADVERTISEMENT

ಈದ್‌ ಉಲ್‌ ಫಿತ್ರ್‌ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 29 ಜುಲೈ 2014, 20:14 IST
Last Updated 29 ಜುಲೈ 2014, 20:14 IST
ಈದ್‌ ಉಲ್‌ ಫಿತ್ರ್‌ ನಿಮಿತ್ತ ನಗರದ ಖುದ್ದೂಸ್‌ ಸಾಹೇಬ್‌ ಈದ್ಗಾ ಮೈದಾನದಲ್ಲಿ ಮಂಗಳವಾರ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಮುಸ್ಲಿಮರು 	–ಪ್ರಜಾವಾಣಿ ಚಿತ್ರ
ಈದ್‌ ಉಲ್‌ ಫಿತ್ರ್‌ ನಿಮಿತ್ತ ನಗರದ ಖುದ್ದೂಸ್‌ ಸಾಹೇಬ್‌ ಈದ್ಗಾ ಮೈದಾನದಲ್ಲಿ ಮಂಗಳವಾರ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಮುಸ್ಲಿಮರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದಾದ್ಯಂತ ಮುಸ್ಲಿಂ ಸಮುದಾಯದವರು ಮಂಗಳವಾರ ಈದ್‌ ಉಲ್ ಫಿತ್ರ್‌ ಅನ್ನು ಸಂಭ್ರಮ, ಸಡಗರದಿಂದ ಆಚರಿಸಿದರು.ಖುದ್ದೂಸ್‌ ಸಾಹೇಬ್‌ ಈದ್ಗಾ ಮೈದಾನ, ಚಾಮರಾಜ­ಪೇಟೆ ಈದ್ಗಾ ಮೈದಾನ, ಮೈಸೂರು ರಸ್ತೆಯ ಮೈದಾನ, ಬನ್ನೇರು­ಘಟ್ಟ ರಸ್ತೆಯ ಮೈದಾನ, ಹೆಬ್ಬಾಳ ಸೇರಿದಂತೆ ಅನೇಕ ಕಡೆಗಳಲ್ಲಿ ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಹಬ್ಬದ ನಿಮಿತ್ತ ಹೊಸ ಉಡುಪು ಧರಿಸಿದ್ದ ಮುಸ್ಲಿಮರು ಕುಟುಂಬ ಸಮೇತ ಮಸೀದಿ ಹಾಗೂ ಪ್ರಾರ್ಥನಾ ಮೈದಾನಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪರಸ್ಪರ ಅಪ್ಪಿಕೊಂಡು ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದ  ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ನಂತರ ಸಂಬಂಧಿಕರ ಮನೆಗಳಿಗೆ ತೆರಳಿ ಶುಭಾಶಯಗಳನ್ನು ವಿನಿಮಯ ಮಾಡುವುದರೊಂದಿಗೆ ಹಬ್ಬದೂಟ ಸವಿದರು.

ವಿಶೇಷ ತಿಂಡಿ- ತಿನಿಸುಗಳು, ಖಾದ್ಯಗಳು, ವಿಶೇಷವಾಗಿ ತಯಾರಿಸಲಾದ ಬಿರಿಯಾನಿ ಹಬ್ಬದ ಕಳೆಯನ್ನು ಹೆಚ್ಚಿಸಿತ್ತು. ಅಲ್ಲದೆ, ನಗರದಲ್ಲಿ ಹಬ್ಬದ ಖರೀದಿ ಭರಾಟೆ ಜೋರಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.