ADVERTISEMENT

ಉತ್ತರ ಕನ್ನಡದ 150 ಮನೆಗಳಿಗೆ ಸೌರವಿದ್ಯುತ್‌ ಬೆಳಕು

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2017, 19:39 IST
Last Updated 17 ಫೆಬ್ರುವರಿ 2017, 19:39 IST
ಉತ್ತರ ಕನ್ನಡದ 150 ಮನೆಗಳಿಗೆ ಸೌರವಿದ್ಯುತ್‌ ಬೆಳಕು
ಉತ್ತರ ಕನ್ನಡದ 150 ಮನೆಗಳಿಗೆ ಸೌರವಿದ್ಯುತ್‌ ಬೆಳಕು   
ಬೆಂಗಳೂರು: ‘ಯುವ’ (ಯೂತ್‌ ಯುನೈಟೆಡ್‌ ಫಾರ್‌ ಎ ವಿಷನ್‌ ಟು ಅಚೀವ್‌) ಸ್ವಯಂ ಸೇವಾ ಸಂಸ್ಥೆಯು ಉತ್ತರ ಕನ್ನಡ ಜಿಲ್ಲೆಯಲ್ಲಿನ 150 ಮನೆಗಳಿಗೆ ಸೌರವಿದ್ಯುತ್‌ ಕಿಟ್‌ ಅಳವಡಿಸಲು ಮುಂದಾಗಿದೆ.
 
ಸಂಸ್ಥೆಯ ಅಧ್ಯಕ್ಷ ಧರಮ್‌ವೀರ್‌ ಸಿಂಗ್‌ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ,‘ಈವರೆಗೂ ವಿದ್ಯುತ್‌ ಸಂಪರ್ಕ ಹೊಂದಿರದ ಹಳ್ಳಿಗಾಡಿನ ಮನೆಗಳಿಗೆ ಬೆಳಕಿನ ಸೌಲಭ್ಯ ಕಲ್ಪಿಸಲು ಸಂಸ್ಥೆ #ಬಿಎಲ್‌ಯುಆರ್‌2 ಎಂಬ ಯೋಜನೆ ರೂಪಿಸಿದೆ. ಈ ಯೋಜನೆಯ ಭಾಗವಾಗಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮತ್ತು ಜೊಯಿಡಾ ತಾಲ್ಲೂಕುಗಳ 21 ಹಳ್ಳಿಗಳ 150 ಮನೆಗಳಿಗೆ ಸೌರವಿದ್ಯುತ್‌ ಕಿಟ್‌ಗಳನ್ನು ಅಳವಡಿಸುತ್ತಿದ್ದೇವೆ’ ಎಂದರು.
 
‘ಮನೆಗಳಿಗೆ ಸೌರವಿದ್ಯುತ್‌ನ ಕಿಟ್‌ ಅಳವಡಿಸುವ ಕೆಲಸದಲ್ಲಿ ಬೆಂಗಳೂರು ಹಾಗೂ ಮೈಸೂರಿನ ಕಾಲೇಜುಗಳ 49 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಫೆ.19, 20 ಮತ್ತು 21 ರಂದು ಕಿಟ್‌ಗಳ ಅಳವಡಿಸುತ್ತೇವೆ. ಯೋಜನೆಗೆ ಸುಮಾರು ₹6 ಲಕ್ಷ ವೆಚ್ಚವಾಗಲಿದೆ’ ಎಂದು ಮಾಹಿತಿ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.