ADVERTISEMENT

ಉತ್ತರ ವಲಯ: 15 ಅನಧಿಕೃತ ಶಾಲೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2015, 19:51 IST
Last Updated 7 ಜುಲೈ 2015, 19:51 IST

ಬೆಂಗಳೂರು: ಬೆಂಗಳೂರು ಉತ್ತರ ವಲಯ 3 ರಲ್ಲಿ 15 ಅನಧಿಕೃತ ಶಾಲೆಗಳು ಇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.
ವೆಂಕಟೇಶಪುರದ ಸಾವರಿನ್ ಹಿರಿಯ ಪ್ರಾಥಮಿಕ ಶಾಲೆ, ಮಾರಪ್ಪಬ್ಲಾಕ್‌ನ ಸೇಂಟ್‌ ಜೆ.ಜಿ.ಮಾರ್ಗರೇಟ್ ಸ್ಕೂಲ್, ಡಿ.ಜೆ.ಹಳ್ಳಿಯ ಕುಶಾಲ್ ಆಂಗ್ಲ ಶಾಲೆ,  ಜಾಮಿಯಾ ಅಶ್ರಫಿಯಾ ಆಂಗ್ಲ ಶಾಲೆ, ಮಾಡ್ರನ್ ಕನ್ನಡ ಮತ್ತು ಆಂಗ್ಲ ಶಾಲೆ, ಸೇಂಟ್ ಥೆರೆಸಾ ನರ್ಸರಿ ಮತ್ತು ಪ್ರಾಥಮಿಕ ಶಾಲೆ, ಡಿಲೈಟ್ ಇಂಗ್ಲಿಷ್ ಶಾಲೆ, ಮಾರ್ವಲೆಸ್ ನರ್ಸರಿ ಮತ್ತು ಪ್ರೈಮರಿ ಶಾಲೆ, ಆಕ್ಸ್‌ಫರ್ಡ್ ಇಂಗ್ಲಿಷ್ ಶಾಲೆ, ಕೆ.ಜಿ.ಹಳ್ಳಿಯ ಇಂದಿರಾ ಮೆಮೋರಿಯಲ್ ಆಂಗ್ಲಶಾಲೆ, ನ್ಯೂ ಕಾರ್ಮೆಲ್ ಆಂಗ್ಲ ಶಾಲೆ, ಆರ್.ಟಿ.ನಗರ ಪ್ರೆಸಿಡೆನ್ಸಿ ಶಾಲೆ, ಕಸ್ತೂರಿನಗರದ ಪ್ರೆಸಿಡೆನ್ಸಿ ಶಾಲೆ, ಕೆ.ಬಿ.ಸಂದ್ರದ ಆಲ್‌ಬುರೂಜ್ ಪ್ರಾಥಮಿಕ ಶಾಲೆ, ಗಂಗಾನಗರದ ಸ್ಪೆಕ್ಟ್ರಂ ಶಾಲೆಗಳು ಅನಧಿಕೃತ.

ಈ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಮಾಡಿಸಿದರೆ ಪೋಷಕರೇ ಜವಾಬ್ದಾರರು. ಈ ಶಾಲೆಗಳಿಗೆ ಈಗಾಗಲೇ ಮಕ್ಕಳನ್ನು ಸೇರಿಸಿದ್ದಲ್ಲಿ ಅಕ್ಕಪಕ್ಕದ ಅಧಿಕೃತ ಶಾಲೆಗಳಿಗೆ ದಾಖಲು ಮಾಡಬೇಕು. ದಾಖಲಿಸುವ ವೇಳೆ ಸಮಸ್ಯೆ ಉಂಟಾದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯನ್ನು (080–25308815) ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.