ADVERTISEMENT

ಎಂಎಸ್‌ಎಂ, ಹಾಥ್‌ ವೇ ವಿವಾದ: ಗ್ರಾಹಕರಿಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2015, 20:01 IST
Last Updated 2 ಸೆಪ್ಟೆಂಬರ್ 2015, 20:01 IST

ಬೆಂಗಳೂರು: ಎಂಎಸ್‌ಎಂ ಮೀಡಿಯಾ ಡಿಸ್ಟ್ರಿಬ್ಯೂಷನ್ ಪ್ರೈವೇಟ್‌ ಲಿಮಿಟೆಡ್‌  ಮತ್ತು ಹಾಥ್‌ ವೇ ಕೇಬಲ್ ಮತ್ತು ಡೇಟಾಕಾಂಗಳ ನಡುವಿನ ತಿಕ್ಕಾಟದಿಂದಾಗಿ ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ.

ಎಂಎಸ್‌ಎಂ ಮೀಡಿಯಾ ಡಿಸ್ಟ್ರಿಬ್ಯೂಷನ್‌ಗೆ ಹಾಥ್ ವೇ ₨ 14 ಕೋಟಿ ಬಾಕಿ ಹಣ ನೀಡಬೇಕಿದೆ. ಈ ಚಂದಾ ಶುಲ್ಕವನ್ನು ಕೂಡಲೇ ಪಾವತಿಸುವಂತೆ ದೂರ ಸಂಪರ್ಕ ವಿವಾದಗಳ ನ್ಯಾಯಿಕ ಪ್ರಾಧಿಕಾರ (ಟಿಡಿಎಸ್‌ಎಟಿ) ಹಾಥ್‌ ವೇ ಗೆ ಸೂಚಿಸಿದೆ.

ಈ ವಿವಾದದಲ್ಲಿ ಹಾಥ್‌ ವೇ ಸೋನಿ ಚಾನೆಲ್ ಪ್ರಸಾರ ನಿಲ್ಲಿಸಿದೆ. ಸೋನಿ ಚಾನೆಲ್ ಪ್ರಸಾರಕ್ಕೆ ಎಂಎಸ್‌ಎಂ ಹೆಚ್ಚಿನ ಶುಲ್ಕ ಕೇಳುತ್ತಿದೆ. ಶುಲ್ಕ ಹೆಚ್ಚಿಸಿದರೆ ಗ್ರಾಹಕರಿಗೆ ತೊಂದರೆಯಾಗುತ್ತದೆ. ಹೀಗಾಗಿ ಚಾನೆಲ್‌ ಪ್ರಸಾರ ನಿಲ್ಲಿಸಲಾಗಿದೆ ಎಂದು ಹಾಥ್‌ ವೇ ಹೇಳಿದೆ.

ಆದರೆ, ಎಂಎಸ್‌ಎಂ ಹೇಳುವುದೇ ಬೇರೆ. ಶುಲ್ಕಕ್ಕೆ ಸಂಬಂಧಿಸಿದ ಒಪ್ಪಂದ ಆಗಸ್ಟ್‌ನಲ್ಲಿಯೇ ಮುಗಿದಿದೆ. ಹೊಸ ಒಪ್ಪಂದದಂತೆ ಹೆಚ್ಚಿನ ಶುಲ್ಕ ಕೇಳಲಾಗುತ್ತಿದೆ ಎಂದು ಎಂಎಸ್‌ಎಂ ಹೇಳಿದೆ. ‘ಎಂಎಸ್‌ಎಂ ಮತ್ತು ಹಾಥ್‌ ವೇ ಮಾತುಕತೆ ಮೂಲಕ ಈ ವಿವಾದವನ್ನು ಬಗೆಹರಿಸಿಕೊಳ್ಳಬೇಕು. ಇಲ್ಲದಿದ್ದರೆ ಗ್ರಾಹಕರಿಗೆ ತೊಂದರೆಯಾಗುತ್ತದೆ’ ಎಂದು ರಾಜ್ಯ ಕೇಬಲ್‌ ಟಿ.ವಿ ಆಪರೇಟರ್‌ಗಳ ಸಂಘದ (ಕೆಎಸ್‌ಸಿಒಎ) ಅಧ್ಯಕ್ಷ ವಿ.ಎಸ್.ಪ್ಯಾಟ್ರಿಕ್‌ ರಾಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.