ADVERTISEMENT

ಕಟ್ಟಡದಿಂದ ಬಿದ್ದು ಸಾವು

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2014, 19:54 IST
Last Updated 28 ನವೆಂಬರ್ 2014, 19:54 IST
ಮಲ್ಲೇಶ್ವರದ ನಿರ್ಮಲಾರಾಣಿ ಕಾನ್ವೆಂಟ್‌ನ ಆವರಣದಲ್ಲಿ ಶುಕ್ರವಾರ ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಶಾಲೆಯ ಮುಖ್ಯಶಿಕ್ಷಕಿ ಸಿಸ್ಟರ್‌ ನೊಯಿಲಾ ಅವರು ಸಾವನ್ನಪ್ಪಿದ್ದರಿಂದ ಸಿಬ್ಬಂದಿ ದುಃಖತಪ್ತರಾಗಿದ್ದರು. ಸಿಸ್ಟರ್‌ ನೊಯಿಲಾ (ಒಳಚಿತ್ರ)
ಮಲ್ಲೇಶ್ವರದ ನಿರ್ಮಲಾರಾಣಿ ಕಾನ್ವೆಂಟ್‌ನ ಆವರಣದಲ್ಲಿ ಶುಕ್ರವಾರ ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಶಾಲೆಯ ಮುಖ್ಯಶಿಕ್ಷಕಿ ಸಿಸ್ಟರ್‌ ನೊಯಿಲಾ ಅವರು ಸಾವನ್ನಪ್ಪಿದ್ದರಿಂದ ಸಿಬ್ಬಂದಿ ದುಃಖತಪ್ತರಾಗಿದ್ದರು. ಸಿಸ್ಟರ್‌ ನೊಯಿಲಾ (ಒಳಚಿತ್ರ)   

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ನಿರ್ಮಲಾರಾಣಿ ಕಾನ್ವೆಂಟ್‌ನ ಮುಖ್ಯಶಿಕ್ಷಕಿ ಸಿಸ್ಟರ್‌ ನೊಯಿಲಾ (58) ಎಂಬುವರು ಶುಕ್ರವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ.

ಮಲ್ಲೇಶ್ವರದ 18ನೇ ಅಡ್ಡರಸ್ತೆಯಲ್ಲಿರುವ ಶಾಲೆಯ ಹಿಂಭಾಗದಲ್ಲಿ ಐದು ಅಂತಸ್ತಿನ ಕಟ್ಟಡದ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ನೊಯಿಲಾ ಅವರು ಪ್ರತಿದಿನ ಬೆಳಿಗ್ಗೆ ವಾಯುವಿಹಾರ ಮುಗಿಸಿಕೊಂಡು ಕಟ್ಟಡದ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸುತ್ತಿದ್ದರು.

ಎಂದಿನಂತೆ ಬೆಳಿಗ್ಗೆ 6.45ರ ಸುಮಾರಿಗೆ ನೊಯಿಲಾ, ಕಟ್ಟಡ ಪರಿಶೀಲನೆಗಾಗಿ ಎರಡನೇ  ಮಹಡಿಗೆ ಹೋಗಿದ್ದರು. ಆಗ ಕಾಲು ಜಾರಿ ಬಿದ್ದಿದ್ದಾರೆ. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಟ್ಟಡದ ಕಾರ್ಮಿಕರು ಶಾಲೆಯ ಸಿಬ್ಬಂದಿಗೆ ವಿಷಯ ತಿಳಿಸಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.