ADVERTISEMENT

‘ಕನ್ನಡ ಅಭಿಮಾನದ ಹುಡುಕಾಟ’

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 19:42 IST
Last Updated 14 ಮಾರ್ಚ್ 2017, 19:42 IST
ನಿವೃತ್ತ ಪೊಲೀಸ್‌ ಅಧಿಕಾರಿ ವೇಮಗಲ್‌ ನಾರಾಯಣಸ್ವಾಮಿ ಅವರು ಶಿಕ್ಷಣ ತಜ್ಞ ಕೆ.ಪಿ.ಪುತ್ತುರಾಯ ಅವರೊಂದಿಗೆ ಮಾತುಕತೆ ನಡೆಸಿದರು. ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ಅಧ್ಯಕ್ಷ ತಿಮ್ಮಯ್ಯ ಇದ್ದರು
ನಿವೃತ್ತ ಪೊಲೀಸ್‌ ಅಧಿಕಾರಿ ವೇಮಗಲ್‌ ನಾರಾಯಣಸ್ವಾಮಿ ಅವರು ಶಿಕ್ಷಣ ತಜ್ಞ ಕೆ.ಪಿ.ಪುತ್ತುರಾಯ ಅವರೊಂದಿಗೆ ಮಾತುಕತೆ ನಡೆಸಿದರು. ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ಅಧ್ಯಕ್ಷ ತಿಮ್ಮಯ್ಯ ಇದ್ದರು   

ಬೆಂಗಳೂರು: ‘ಮಕ್ಕಳು ಇಂಗ್ಲಿಷ್‌ನಲ್ಲೇ ಮಾತನಾಡಬೇಕು ಎಂಬ ಭ್ರಮೆಯಲ್ಲಿ ಪೋಷಕರು ಇದ್ದಾರೆ. ಅವರನ್ನು ಸರಿಮಾಡಿದರೆ ಎಲ್ಲವೂ ಸರಿ ಹೋಗುತ್ತದೆ’ ಎಂದು ಶಿಕ್ಷಣ ತಜ್ಞ ಕೆ.ಪಿ. ಪುತ್ತುರಾಯ ಅಭಿಪ್ರಾಯಪಟ್ಟರು.

ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ಮಂಗಳವಾರ ಇಂದಿರಾನಗರದಲ್ಲಿ ಹಮ್ಮಿಕೊಂಡಿದ್ದ ‘ಕನ್ನಡ ಉಳಿಸುವ ಹಾಗೂ ಬೆಳೆಸುವ ಪರಿ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ನಗರದಲ್ಲಿ ಇಬ್ಬರು ತಮಿಳು ಮಾತನಾಡುತ್ತಿದ್ದರೆ ಅದರಲ್ಲಿ ಒಬ್ಬರು ಕನ್ನಡದವಾಗಿರುತ್ತಾರೆ. ಇಬ್ಬರು ಕನ್ನಡ ಮಾತನಾಡುತ್ತಿದ್ದರೆ ಅವರು ನಗರದವರೇ ಆಗಿರುವುದಿಲ್ಲ. ಇಬ್ಬರು ಇಂಗ್ಲಿಷ್‌ ಮಾತನಾಡುತ್ತಿದ್ದರೆ ಅವರು ಖಂಡಿತವಾಗಿಯೂ ಬೆಂಗಳೂರಿನವರೇ ಆಗಿರುತ್ತಾರೆ. ನಗರದಲ್ಲಿ ಕನ್ನಡದ ಸ್ಥಿತಿ ಹೀಗಿದೆ. ನಾವು ಇದನ್ನು ಬದಲಿಸುವ ಕೆಲಸ ಮಾಡಬೇಕು’ ಎಂದರು.

ADVERTISEMENT

ಒಕ್ಕೂಟದ ಕಾರ್ಯಾಧ್ಯಕ್ಷ ಸಿದ್ದಯ್ಯ, ‘ಕನ್ನಡದ ಬಗ್ಗೆ ನಿರಭಿಮಾನ ಹೊಂದಿರುವವರೇ ಹೆಚ್ಚಿರುವ ಇಂದಿರಾನಗರ ಭಾಗದಲ್ಲಿ ಕನ್ನಡ ಚಟುವಟಿಕೆ ನಡೆಸಲು ಒಂದು ಕಲಾ ಭವನದ ಅಗತ್ಯವಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.