ADVERTISEMENT

ಕೆಎಸ್‌ಡಿಎಲ್‌: ಲಾಭಾಂಶ ಚೆಕ್ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2015, 20:06 IST
Last Updated 2 ಮಾರ್ಚ್ 2015, 20:06 IST
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಸಂಸ್ಥೆ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಸ್ಥೆಯ ನೂತನ ಸಾಬೂನಿನ ಪರಿಮಳವನ್ನು ಆಸ್ವಾದಿಸಿದರು. ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭ, ನಗರಾಭಿವೃದ್ಧಿ ಸಚಿವ ವಿನಯಕುಮಾರ ಸೊರಕೆ ಮತ್ತು ವಿಧಾನ ಪರಿಷತ್ತಿನ ಸದಸ್ಯ ಐವಾನ್‌ ಡಿಸೋಜ ಚಿತ್ರದಲ್ಲಿದ್ದಾರೆ                                                   –ಪ್ರಜಾವಾಣಿ ಚಿತ್ರ
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಸಂಸ್ಥೆ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಸ್ಥೆಯ ನೂತನ ಸಾಬೂನಿನ ಪರಿಮಳವನ್ನು ಆಸ್ವಾದಿಸಿದರು. ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭ, ನಗರಾಭಿವೃದ್ಧಿ ಸಚಿವ ವಿನಯಕುಮಾರ ಸೊರಕೆ ಮತ್ತು ವಿಧಾನ ಪರಿಷತ್ತಿನ ಸದಸ್ಯ ಐವಾನ್‌ ಡಿಸೋಜ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಸಂಸ್ಥೆಯ (ಕೆಎಸ್‌ಡಿಎಲ್‌) 2013–14ನೇ ಸಾಲಿನ ₹ 5ಕೋಟಿ ಲಾಭಾಂಶದ ಚೆಕ್‌ ಅನ್ನು ಸಂಸ್ಥೆಯ ಅಧ್ಯಕ್ಷೆ ವೆರೊನಿಕಾ ಕರ್ನೇಲಿಯೊ ಅವರು ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಸ್ತಾಂತರಿಸಿದರು.

ನಗರದಲ್ಲಿ ಆಯೋಜಿಸಿದ್ದ ಕಾರ್ಯ-ಕ್ರಮ-ದಲ್ಲಿ  ಚೆಕ್‌ ಹಸ್ತಾಂತರಿಸಿ ಮಾತ-ನಾಡಿದ ವೆರೊನಿಕಾ, ‘ಸಂಸ್ಥೆಯು ಪ್ರತಿ-ವರ್ಷ ಹೊಸ ಉತ್ಪನ್ನಗಳನ್ನು ಆವಿ-ಷ್ಕರಿಸಿ ಮಾರುಕಟ್ಟೆಗೆ ಪರಿಚಯಿಸುವ ಮೂಲಕ ವರ್ಷದಿಂದ ವರ್ಷಕ್ಕೆ ವಹಿವಾಟು ವೃದ್ಧಿಸಿಕೊಂಡು ದೇಶಿಯ ಮಾರುಕಟ್ಟೆಯಲ್ಲಿ ಶೇ 20 ರಷ್ಟು ಗಣನೀಯ ಪ್ರಮಾಣದ ಬೆಳವಣಿಗೆ ಹೊಂದಿದೆ’ ಎಂದು ತಿಳಿಸಿದರು.

‘2013–14ನೇ ಸಾಲಿನಲ್ಲಿ ಸಂಸ್ಥೆಯು ₹ 353 ಕೋಟಿ ವಹಿವಾಟು ನಡೆಸಿ ₹ 32.80 ಕೋಟಿ ದಾಖಲೆ ಲಾಭ ಗಳಿಸಿದೆ. ಪ್ರಸ್ತುತ ಸಾಲಿನಲ್ಲಿ ₹ 390 ಕೋಟಿ ವಹಿವಾಟಿನ ಗುರಿ ಹೊಂದಲಾಗಿದೆ. ಫೆಬ್ರವರಿ ಅಂತ್ಯಕ್ಕೆ ಸಂಸ್ಥೆಯು ₹ 360 ಕೋಟಿಯಷ್ಟು ವಹಿವಾಟು ಮಾಡಿದೆ. ಇದರ ಪ್ರಮಾಣ ಮಾರ್ಚ್‌ ಅಂತ್ಯಕ್ಕೆ ₹ 400 ಕೋಟಿ ತಲುಪುವ ನಿರೀಕ್ಷೆ ಇದೆ’ ಎಂದರು.

‘ಬಹುರಾಷ್ಟ್ರೀಯ ಕಂಪೆನಿಗಳ ಪೈಪೋಟಿ ಎದುರಿಸುವ ಹಾಗು ಉತ್ಪನ್ನ-ಗಳ ಗುಣಮಟ್ಟ ಕಾಯ್ದುಕೊಳ್ಳುವುದ-ಕ್ಕಾಗಿ ಸಂಸ್ಥೆಯು ಹೊಸ ಯಂತ್ರೋ-ಪಕರಣ ಖರೀದಿ ಹಾಗೂ ಉತ್ಪಾದನಾ ಸ್ಥಾವರ ಆಧುನೀಕರಣಗೊಳಿಸುವ ಉದ್ದೇಶ-ದಿಂದ ಹೊಂದಿದೆ.   2011-ರಲ್ಲಿ ಸರ್ಕಾರಕ್ಕೆ ಈ ಕುರಿತು ಪ್ರಸ್ತಾವ ಕೂಡ ಸಲ್ಲಿಸಲಾಗಿದೆ. ಯೋಜನೆಗೆ ತಗಲುವ ₹ 27 ಕೋಟಿ ವೆಚ್ಚವನ್ನು ಸಂಸ್ಥೆಯೇ ಭರಿಸಲಿದೆ. ಆದ್ದರಿಂದ, ಸರ್ಕಾರ ಕೂಡಲೇ ಈ ಯೋಜನೆ ಅನುಮೋದನೆ ನೀಡಬೇಕು’ ಎಂದು ಮನವಿ ಮಾಡಿಕೊಂಡರು.

‘ಪ್ರತಿ ವರ್ಷ ಉತ್ಪನ್ನಗಳ ತಯಾರಿಕೆ-ಗಾಗಿ ₹ 120–150 ಕೋಟಿ ಮೌಲ್ಯದ ಕಚ್ಚಾ ಸಾಮಗ್ರಿಗಳು ಸೇರಿದಂತೆ ಸುಗಂಧ ದ್ರವ್ಯವನ್ನು ಸ್ಥಳೀಯ ಸರಬ-ರಾಜುದಾರರಿಂದ ಖರೀದಿಸಲಾಗು-ತ್ತದೆ. ಇವುಗಳನ್ನು  ವಿದೇಶದಿಂದ ನೇರ-ವಾಗಿ ನಾವೇ ಆಮದು ಮಾಡಿ-ಕೊಂಡರೆ ಸಂಸ್ಥೆಗೆ ಕೋಟ್ಯಂತರ ರೂಪಾಯಿ ಉಳಿತಾಯವಾಗಿ ಉತ್ಪನ್ನಗಳ ಬೆಲೆ ಕಡಿಮೆಯಾಗುತ್ತದೆ. ಆದ್ದರಿಂದ, ಸರ್ಕಾರ ಸಂಸ್ಥೆಯ ಹಿರಿಯ ಅಧಿಕಾರಿಗಳ ವಿದೇಶ ಪ್ರವಾಸಕ್ಕೆ ಕೆಲ ನಿಯಮಗಳನ್ನು ಸಡಿಲಿಸಿ ಅನುಮತಿ ನೀಡಬೇಕು’ ಎಂದು ವೆರೋನಿಕಾ ಕೋರಿದರು.

ಸಿದ್ದರಾಮಯ್ಯ ಅವರು ಮಾತ-ನಾಡಿ, ‘ಆಡಳಿತಶಾಹಿಗಳ ತಪ್ಪು ನಿರ್ಧಾರ-ಗಳಿಂದಾಗಿ ಸರ್ಕಾರದ ಅನೇಕ ಸಂಸ್ಥೆಗಳು ನಷ್ಟ ಅನುಭವಿಸಿ ನಾಶ ಹೊಂದುತ್ತವೆ. ಪ್ರತಿಯೊಬ್ಬ ಕಾರ್ಮಿಕ ಮತ್ತು ಅಧಿಕಾರಿಯು ಪ್ರಾಮಾಣಿಕತೆ ಮತ್ತು ಅರ್ಪಣಾ ಮನೋಭಾವದಿಂದ ದುಡಿದರೆ ಸಂಸ್ಥೆಗೆ ಲಾಭವಾಗುತ್ತದೆ. ಇಂದು ಮಾರುಕಟ್ಟೆಯಲ್ಲಿ ಪೈಪೋಟಿ ಹೆಚ್ಚಿದೆ.

ಅದನ್ನು ಗುಣಮಟ್ಟ ಕಾಯ್ದುಕೊಳ್ಳುವುದರಿಂದ ಮಾತ್ರ ಎದುರಿಸಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಮೈಸೂರು ಸ್ಯಾಂಡಲ್‌ ಬಾಡಿ  ಮತ್ತು ಹ್ಯಾಂಡ್‌ ವಾಷ್ ಸೇರಿದಂತೆ ನಾಲ್ಕು ನೂತನ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.