ADVERTISEMENT

ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2015, 20:26 IST
Last Updated 26 ಜನವರಿ 2015, 20:26 IST

ಬೆಂಗಳೂರು: ಗಣರಾಜ್ಯೋತ್ಸವದ ಅಂಗವಾಗಿ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಆಯೋಜಿಸಲಾ­ಗಿದ್ದ ಹತ್ತು ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಸೋಮವಾರ ತೆರೆಬಿದ್ದಿದೆ.

ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ಉದ್ಯಾನ ಕಲಾ ಸಂಘದ ಆಶ್ರಯದಲ್ಲಿ ಆಯೋ­ಜಿ­ಸಲಾಗಿದ್ದ 201ನೇ ಫಲಪುಷ್ಪ ಪ್ರದರ್ಶನಕ್ಕೆ ಈ ಬಾರಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. 10 ದಿನಗಳ ಕಾಲ ನಡೆದ ಪ್ರದರ್ಶನ­ವನ್ನು 2.65 ಲಕ್ಷ ಜನರು ವೀಕ್ಷಿಸಿದ್ದು, ₨ 1.41 ಕೋಟಿ ಹಣ ಸಂಗ್ರಹವಾಗಿದೆ.

ಗಣರಾಜ್ಯೋತ್ಸವದ ಅಂಗವಾಗಿ ಸರ್ಕಾರಿ ರಜೆ ಇದ್ದುದರಿಂದ ಹಾಗೂ ಫಲ ಪುಷ್ಪ ಪ್ರದರ್ಶನದ ಕೊನೆಯ ದಿನವಾಗಿದ್ದರಿಂದ ಸಿಲಿಕಾನ್

ಫಲ ಪುಷ್ಪ ಪ್ರದರ್ಶನದ ಕೊನೆ ದಿನವಾಗಿದ್ದರಿಂದ, ಕುಟುಂಬ ಸಮೇತವಾಗಿ ಲಾಲ್‌ಬಾಗ್‌ಗೆ ಬಂದಿದ್ದೇನೆ. ಖುಷಿಯಾಯಿತು. ಹೂವಿನ ಕೆಂಪುಕೋಟೆಯನ್ನು ಲಾಲ್‌ಬಾಗ್‌ನಲ್ಲಿಯೇ ನೋಡಲು ಸಂತಸವಾಗುತ್ತಿದೆ.
– ಮನೀಷ್‌, ಖಾಸಗಿ ಕಂಪೆನಿ ನೌಕರ
ಮಗಳು ಬಹಳ ಹಠ ಮಾಡಿದ್ದರಿಂದ ಲಾಲ್‌ಬಾಗ್‌ಗೆ ಬಂದಿದ್ದೇನೆ. ಫಲ ಪುಷ್ಪಗಳು ಎಂದಿಗೂ ಮನಸ್ಸಿಗೆ ಮುದ ನೀಡುತ್ತವೆ. ಹೀಗಾಗಿ, ಪ್ರತಿವರ್ಷದ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಬರುತ್ತೇನೆ.
– ಕಾರ್ತಿಕ್‌, ಎಂಜಿನಿಯರ್‌
ಈ ಬಾರಿ ಕೆಂಪುಕೋಟೆ ನಿರ್ಮಿಸಿರುವುದು ಬಹಳ ಸಂತಸ ತಂದಿದೆ. ಈಗ ಎರಡನೇ ಬಾರಿ ಸ್ನೇಹಿತರ ಜತೆ ವೀಕ್ಷಿಸಲು ಬಂದಿದ್ದೇನೆ. ಮೊದಲ ಬಾರಿ ಕುಟುಂಬದವರ ಜತೆಗೆ ಬಂದಿದ್ದೆ. 
– ಸುಮಾ, ಕಾಲೇಜು ವಿದ್ಯಾರ್ಥಿ

ಸಿಟಿ ಜನರು ಲಾಲ್‌ಬಾಗ್‌ನತ್ತ ಹೆಜ್ಜೆ ಹಾಕಿದ್ದರು. ಈ ಒಂದೇ ದಿನ 3,290 ಮಕ್ಕಳು ಸೇರಿದಂತೆ 76,695 ಜನರು ಪ್ರದರ್ಶನ ವೀಕ್ಷಿಸಿದರು.

ವೀಕ್ಷಕರ ಸಂಖ್ಯೆ ಇಳಿಕೆ: ಕಳೆದ ಸ್ವಾತಂತ್ರ್ಯೋ­ತ್ಸವದ ಸಂದರ್ಭದಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನಕ್ಕೆ ದೇಶ ವಿದೇಶಗಳಿಂದ ಜನರು ಮುಗಿಬಿದ್ದು ವೀಕ್ಷಿಸಿದ್ದ ಕಾರಣ, ಈ ಬಾರಿಯೂ ವೀಕ್ಷಕರ ಸಂಖ್ಯೆ ಏರಬಹುದು ಎಂದು ಇಲಾಖೆ ಅಂದಾಜಿಸಿತ್ತು.

ಕಳೆದ ಬಾರಿಯ ಸ್ವಾತಂತ್ರ್ಯೋತ್ಸವ ಪ್ರದರ್ಶನ­ವನ್ನು ಸುಮಾರು 4 ಲಕ್ಷ ಮಂದಿ ವೀಕ್ಷಿಸಿದ್ದರು ಆದರೆ, ಈ ಬಾರಿ ವೀಕ್ಷಕರ ಸಂಖ್ಯೆಯು ಕುಸಿದಿರು­ವುದಲ್ಲದೆ, ಲಾಭವೂ ಕುಸಿದಿದೆ.

‘ಆಗಸ್ಟ್‌ ತಿಂಗಳಿನ ಫಲ ಪುಷ್ಪ ಪ್ರದರ್ಶನಕ್ಕೆ ಹೋಲಿಸಿದರೆ, ಈ ಬಾರಿ ವೀಕ್ಷಕರ ಸಂಖ್ಯೆ ಕಡಿಮೆ­ಯಾಗಿದೆ. ಹೆಚ್ಚಿನ ಜನರು ಬರುವ ನಿರೀಕ್ಷೆಯಿತ್ತು’ ಎಂದು ತೋಟಗಾರಿಕೆ ಇಲಾಖೆ (ಲಾಲ್‌ಬಾಗ್‌) ಉಪನಿರ್ದೇಶಕ ಜೆ.ಗುಣವಂತ ತಿಳಿಸಿದರು.

ಈ ಬಾರಿಯೂ ಉದ್ಯಾನವನದ ಸ್ವಚ್ಚತೆಗೆ ಕ್ರಮ ಕೈಗೊಳ್ಳಲಾಗಿತ್ತು. ಆದರೂ, ಎಲ್ಲೆಂದರಲ್ಲಿ ತ್ಯಾಜ್ಯ ಹಾಕುವವರ ಸಂಖ್ಯೆ ಹೆಚ್ಚಾಗಿಯೇ ಇತ್ತು. ಗಾಜಿನ ಮನೆಯ ಮುಂಭಾಗದ ಮಳಿಗೆ ವ್ಯಾಪಾರಿಗಳು ಹೆಚ್ಚಿನ ವಹಿವಾಟು ನಡೆಸಿದರು.

ಆನ್‌ಲೈನ್ ಪ್ರಯತ್ನ: ಇದೇ ಮೊದಲ ಬಾರಿಗೆ ಆನ್‌ಲೈನ್ ಮೂಲಕ ಬುಕ್ಕಿಂಗ್ ವ್ಯವಸ್ಥೆಗೆ ತಕ್ಕಮಟ್ಟಿಗೆ ಪ್ರತಿಕ್ರಿಯೆ ವ್ಯಕ್ತವಾಗಿದೆ. 10 ದಿನಗಳಲ್ಲಿ 601 ಮಕ್ಕಳು ಸೇರಿದಂತೆ 3,530 ಮಂದಿ ಮಾತ್ರ ಆನ್‌ಲೈನ್‌ ಬಳಕೆ ಮಾಡಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.