ADVERTISEMENT

ಗೋಡೆಗುಂಟ ಬೆಳೆದ ಉದ್ಯಾನ

300ಕ್ಕೂ ಅಧಿಕ ಸಸ್ಯ ಕುಂಡಗಳಿಗೆ ಸ್ಥಳಾವಕಾಶ

​ಪ್ರಜಾವಾಣಿ ವಾರ್ತೆ
Published 27 ಮೇ 2016, 19:33 IST
Last Updated 27 ಮೇ 2016, 19:33 IST
ಮಹೇಶ್‌ ಶೆಟ್ಟಿ ಅವರು ಗಿಡಗಳಿಗೆ ನೀರುಣಿಸಿದರು
ಮಹೇಶ್‌ ಶೆಟ್ಟಿ ಅವರು ಗಿಡಗಳಿಗೆ ನೀರುಣಿಸಿದರು   

ಬೆಂಗಳೂರು: ಉದ್ಯಾನ ನಿರ್ಮಿಸಲು ಜಾಗದ ಕೊರತೆಯೇ? ಕೇವಲ 10 ಚದರಡಿ ಜಾಗದಲ್ಲೇ  ಉದ್ಯಾನ ನಿರ್ಮಿಸಲು ಸಾಧ್ಯವಿದೆ ಎಂಬುದನ್ನು ನಗರದ ಜಿಪಿಎಸ್ ಇನ್‌ಸ್ಟಿಟ್ಯೂಟ್‌ ಆಫ್ ಅಗ್ರಿಕಲ್ಚರಲ್‌ ಮ್ಯಾನೇಜ್‌ಮೆಂಟ್‌ ನಿರೂಪಿಸಿದೆ.

ಕಾಲೇಜಿನ ಆವರಣದಲ್ಲಿ ‘ಲಂಬ ಉದ್ಯಾನ’ವನ್ನು ನಿರ್ಮಿಸಲಾಗಿದ್ದು, 300ಕ್ಕೂ ಹೆಚ್ಚಿನ ಸಸ್ಯ ಪ್ರಭೇದಗಳನ್ನು ಬೆಳೆಸಲಾಗಿದೆ.

ಸಾಮಾನ್ಯವಾಗಿ ಉದ್ಯಾನಗಳನ್ನು ವಿಸ್ತಾರವಾದ ಜಾಗದಲ್ಲಿ ನಿರ್ಮಿಸಲಾಗುತ್ತದೆ. ಆದರೆ, ಲಂಬ ಉದ್ಯಾನಗಳಿಗೆ ಕೆಲವೇ ಅಡಿಗಳ ಜಾಗ ಸಾಕು. ಕಾಲೇಜಿನ ಕಟ್ಟಡಕ್ಕೆ ಹೊಂದಿಕೊಂಡಂತೆ ನೇರವಾಗಿ 50 ಅಡಿ ಎತ್ತರ ಹಾಗೂ 7.5 ಅಡಿ ಅಗಲದ ಕಬ್ಬಿಣದ ಕಂಬಗಳನ್ನು ನೆಡಲಾಗಿದೆ. ಇದಕ್ಕೆ ಚಕ್ರ ಬಾವಿ ಪರಿಕಲ್ಪನೆಯಲ್ಲಿ ಬಾಕ್ಸ್‌ಗಳನ್ನು ಅಳವಡಿಸಲಾಗಿದೆ. ಈ ಬಾಕ್ಸ್‌ಗಳಲ್ಲಿ ಎಂಟು ಕುಂಡಗಳನ್ನು ಇಡಬಹುದು. ಬಾಕ್ಸ್‌ಗಳು ಮೇಲಿಂದ ಕೆಳಗೆ ಹಾಗೂ ಕೆಳಭಾಗದಿಂದ ಮೇಲ್ಮುಖವಾಗಿ ಸಂಚರಿಸಲು ಎಸ್ಕಲೇಟರ್‌ ಅಳವಡಿಸಲಾಗಿದೆ. ಇದರಿಂದ ಗಿಡಗಳಿಗೆ ನೀರುಣಿಸಲು ಅನುಕೂಲವಾಗಲಿದೆ.

ಜಿಪಿಎಸ್‌ ಕಾಲೇಜು ಟ್ರಸ್ಟಿ ಮಹೇಶ್‌ ಶೆಟ್ಟಿ, ‘ಆಧುನಿಕ ವಾಸ್ತುಶಿಲ್ಪ ಮತ್ತು ಪರಿಸರ ಕಾಳಜಿಯ ಅನನ್ಯ ಸಮ್ಮಿಲನ ಈ ಉದ್ಯಾನ. ಪರಿಸರ ಪೂರಕ ಬಹುಮಹಡಿ ಕಟ್ಟಡಗಳನ್ನು ಹೇಗೆ ನಿರ್ಮಿಸಬಹುದು ಹಾಗೂ ಆ ಮೂಲಕ ಪರಿಸರದ ಸವಾಲುಗಳಿಗೆ ಹೇಗೆ ಉತ್ತರ ನೀಡಬಹುದು ಎನ್ನುವುದಕ್ಕೆ ಈ ಉದ್ಯಾನ ಮಾದರಿ’ ಎಂದರು.

‘ಇಂತಹ ಮೂರು ಉದ್ಯಾನಗಳನ್ನು ನಿರ್ಮಿಸುವ ಉದ್ದೇಶವಿದೆ. ಈ ಪೈಕಿ ಒಂದರಲ್ಲಿ ತರಕಾರಿಯನ್ನು ಬೆಳೆಯುತ್ತೇವೆ. ಕಾಲೇಜಿನಲ್ಲಿರುವ ವಿದ್ಯಾರ್ಥಿ ನಿಲಯಕ್ಕೆ ಬೇಕಾದ ತರಕಾರಿಯನ್ನು ಇಲ್ಲಿಂದಲೇ ಪೂರೈಕೆ ಮಾಡುವ ಉದ್ದೇಶವಿದೆ’ ಎಂದು ಹೇಳಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.