ADVERTISEMENT

ಜನಪದೀಯ ದೃಷ್ಟಿಕೋನದ ಕಂಬಾರ

ಸಾಹಿತಿ ಬರಗೂರು ರಾಮಚಂದ್ರಪ್ಪ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2014, 19:30 IST
Last Updated 28 ಮಾರ್ಚ್ 2014, 19:30 IST
ಜಗದ್ಗುರು ರೇಣುಕಾಚಾರ್ಯ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಮಹಾವಿದ್ಯಾ­ಲ­ಯ ನಗರದಲ್ಲಿ ಶುಕ್ರವಾರ ಆಯೋ­ಜಿಸಿದ್ದ ‘ಡಾ.ಚಂದ್ರಶೇಖರ ಕಂಬಾರರ ಸಾಹಿತ್ಯ–ಒಂದು ಅವಲೋಕನ’ ಕುರಿತ ವಿಚಾರ ಸಂಕಿರಣದಲ್ಲಿ ವಿಮರ್ಶಕ ಪ್ರೊ.­ಬರಗೂರು ರಾಮ­ಚಂದ್ರಪ್ಪ  ವಿದ್ಯಾರ್ಥಿನಿ­ಯರೊಂದಿಗೆ ಮಾತನಾಡಿದರು. ಕಾಲೇ­ಜಿನ ಪ್ರಾಚಾರ್ಯ ಡಾ.ಎಸ್‌.ವೆಂಕಟೇಶ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡ­ಲೀಕ ಹಾಲಂಬಿ, ‘ಸುಧಾ’ ವಾರ­ಪತ್ರಿಕೆಯ ಸುದ್ದಿ ಸಂಪಾದಕ ಗುಡಿಹಳ್ಳಿ ನಾಗರಾಜ ಇತರರು ಇದ್ದಾರೆ

ಬೆಂಗಳೂರು: ‘ಕಂಬಾರರದ್ದು ಸಿದ್ಧಮಾದರಿಗೆ ದಕ್ಕುವ ಸಾಹಿತ್ಯವಲ್ಲ. ವೈಯಕ್ತಿಕ ಅಂತರಂಗದ ಅನಾವರಣವೇ ಅವರ ಸಾಹಿತ್ಯದ ಪ್ರಮುಖ ಉದ್ದೇಶ’ ಎಂದು ವಿಮರ್ಶಕ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಜಗದ್ಗುರು ರೇಣುಕಾಚಾರ್ಯ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯವು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಡಾ.ಚಂದ್ರ­ಶೇಖರ ಕಂಬಾರರ ಸಾಹಿತ್ಯ–ಒಂದು ಅವಲೋಕನ’ ಕುರಿತ ವಿಚಾರ ಸಂಕಿರಣ­ದಲ್ಲಿ ಅವರು ಮಾತನಾಡಿದರು.

‘ಕಂಬಾರರ ನಾಟಕಗಳು ಹಳ್ಳಿ ಮತ್ತು ನಗರ ಸಂಘರ್ಷಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿರುವುದಲ್ಲದೇ, ವ್ಯಕ್ತಿ ಪ್ರಜ್ಞೆಯ ಜತೆಯಲ್ಲಿ ಸಾಮು­ದಾಯಿಕ ಪ್ರಜ್ಞೆಯನ್ನು ಸಶಕ್ತ­ವಾಗಿ ಬಿಂಬಿಸುತ್ತದೆ’ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

‘ಮಾವೊತ್ಸೆ ಕುರಿತು ಬರೆದ ಕವಿತೆಯಲ್ಲಿ ಜನಪ್ರಿಯತೆಯನ್ನು ಹೊಗಳುತ್ತಲೇ ವ್ಯಂಗ್ಯವಾಡಿದ್ದಾರೆ. ಅವರ ಕಾವ್ಯ ಪ್ರಕಾರವು ವೈಭವ, ವ್ಯಂಗ್ಯ, ವಿಷಾದ ನಂತರ ಪ್ರತಿರೋಧದ ಮಾದರಿಯಲ್ಲಿ ಸಾಗುತ್ತದೆ. ಈ ಪ್ರಕಾರವು ಕನ್ನಡಕ್ಕೆ ಸಲ್ಲುವ ವಿಶೇಷ ಕಾಣಿಕೆ’ ಎಂದು ಬಣ್ಣಿಸಿದರು.

ಕಂಬಾರ ಕನ್ನಡದ ಬ್ರೆಕ್ಟ್‌: ‘ಕಂಬಾರ ಅವರನ್ನು ನಾಟಕಕಾರ ಬ್ರೆಕ್ಟ್‌ಗೆ ಹೋಲಿಸ­ಬಹುದು. ಬ್ರೆಕ್ಟ್‌ ತಮ್ಮ ನಾಟಕಗಳಲ್ಲಿ ಬಂಡವಾಳಶಾಹಿ ನಿಲು­ವನ್ನು  ವಿರೋಧಿಸಿದರೆ, ಕಂಬಾರ ಜಮೀನ್ದಾರಿ ಪದ್ದತಿಯನ್ನು ಪ್ರತಿರೋಧಿ­ಸಿದರು. ಜಾಗತೀಕರಣದ ಭರಾಟೆ­ಯಲ್ಲಿ­ಯೂ ಈ ನೆಲದ ಸಂಸ್ಕೃತಿ ಅಳಿಯದಂತೆ ಅಕ್ಷರ ರೂಪ ನೀಡಿದ್ದಾರೆ’ ಎಂದರು.

ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪುಂಡಲೀಕ ಹಾಲಂಬಿ, ‘ಕಾವ್ಯ, ಕಥನ, ನಾಟಕ, ಪ್ರಬಂಧ ಹೀಗೆ ಎಲ್ಲ ಪ್ರಕಾರ­ಗಳಲ್ಲೂ ಉತ್ತಮ ಕೃಷಿ ನಡೆಯ­ಬೇಕು. ಆಗ ಕನ್ನಡ ಸಾಹಿತ್ಯ ಲೋಕ ಶ್ರೀಮಂತ­ವಾಗುತ್ತದೆ’ ಎಂದು ಹೇಳಿದರು.

‘ಕನ್ನಡದ ಅಸ್ತಿತ್ವಕ್ಕೆ ಆತಂಕ ಎದುರಾಗಿದ್ದು, ವಿಶ್ವವಿದ್ಯಾಲಯವು ಕನ್ನಡ ಉಳಿಸುವುದಕ್ಕೆ ಹೆಚ್ಚಿನ ಒತ್ತು ನೀಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.