ADVERTISEMENT

ತರಬೇತಿ ಶಿಬಿರ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2016, 20:07 IST
Last Updated 2 ಡಿಸೆಂಬರ್ 2016, 20:07 IST

ಬೆಂಗಳೂರು:  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಯುವತಿಯರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಡಿಸೆಂಬರ್ 14ರಿಂದ ಉಚಿತ ಬ್ಯೂಟಿಷಿಯನ್ ತರಬೇತಿ ಶಿಬಿರ ಆರಂಭಿಸುತ್ತಿದೆ.

ಕನಿಷ್ಠ ಎಸ್ಎಸ್ಎಲ್‌ಸಿ (ಪಾಸ್/ಫೇಲ್) ವಿದ್ಯಾರ್ಹತೆಯ, 15 ರಿಂದ 35 ವರ್ಷ ವಯೋಮಾನದ ಆಸಕ್ತ ಯುವತಿಯರು ತರಬೇತಿಯಲ್ಲಿ ಭಾಗವಹಿಸಬಹುದು. ಹೊರ ಜಿಲ್ಲೆಗಳಿಂದ ಬರುವ ಶಿಬಿರಾರ್ಥಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.
ವಿಳಾಸ:   ಸಹಾಯಕ ನಿರ್ದೇಶಕರು, ರಾಜ್ಯ ಯುವ ಕೇಂದ್ರ, ನೃಪತುಂಗ ರಸ್ತೆ. ಸಂಪರ್ಕ:  080 22214911

ಉಚಿತ ಆರೋಗ್ಯ ಶಿಬಿರ
ಉದಯಭಾನು ಕಲಾಸಂಘ ಡಿಸೆಂಬರ್‌ 11ರಂದು ಉಚಿತ ನೇತ್ರ  ಹಾಗೂ ದಂತ ತಪಾಸಣಾ ಶಿಬಿರ ಏರ್ಪಡಿಸಿದೆ. ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಅಗತ್ಯವಿರುವವರಿಗೆ ನಾರಾಯಣ ನೇತ್ರಾಲಯದಲ್ಲಿ ಉಚಿತ ಚಿಕಿತ್ಸೆ ಕೊಡಿಸಲಾಗುವುದು ಸಂಘದ ಪ್ರಕಟಣೆ ತಿಳಿಸಿದೆ.
ಸಂಪರ್ಕ: 080 26609343

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.