ADVERTISEMENT

ತೆಲುಗು ಲೇಖಕ ಕಂಚ ಐಲಯ್ಯ ಬಂಧನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 19:36 IST
Last Updated 18 ಸೆಪ್ಟೆಂಬರ್ 2017, 19:36 IST
ಕಂಚ ಐಲಯ್ಯ ಅವರನ್ನು ಬಂಧಿಸುವಂತೆ ಆಗ್ರಹಿಸಿ ಪುರಭವನದ ಮುಂದೆ ಪ್ರತಿಭಟನೆ ನಡೆಯಿತು. – ಪ್ರಜಾವಾಣಿ ಚಿತ್ರ
ಕಂಚ ಐಲಯ್ಯ ಅವರನ್ನು ಬಂಧಿಸುವಂತೆ ಆಗ್ರಹಿಸಿ ಪುರಭವನದ ಮುಂದೆ ಪ್ರತಿಭಟನೆ ನಡೆಯಿತು. – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ತೆಲುಗು ಲೇಖಕ ಪ್ರೊ.ಕಂಚ ಐಲಯ್ಯ ಷೆಪರ್ಡ್‌ ಅವರು ‘ಸಾಮಾಜಿಕ ಸ್ಮಗ್ಲರ್ಲು ಕೋಮಟೋಳ್ಳು’ ಕೃತಿಯಲ್ಲಿ ಆರ್ಯವೈಶ್ಯ ಜನಾಂಗದವರ ಬಗ್ಗೆ ಅವಹೇಳನಕಾರಿಯಾಗಿ ಬರೆದಿದ್ದಾರೆ. ಅವರನ್ನು ಬಂಧಿಸಬೇಕು’ ಎಂದು ಒತ್ತಾಯಿಸಿ ಬೆಂಗಳೂರು ಆರ್ಯವೈಶ್ಯ ಮಂಡಳಿ ಒಕ್ಕೂಟದ ಸದಸ್ಯರು ಪುರಭವನದ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

ಒಕ್ಕೂಟದ ಅಧ್ಯಕ್ಷ ಕೆ.ವೆಂಕಟೇಶ್ ಬಾಬು, ‘ಬ್ರಾಹ್ಮಣರು ಹಾಗೂ ಆರ್ಯವೈಶ್ಯರ ಬಗ್ಗೆ ಐಲಯ್ಯ‌ ಮನಬಂದಂತೆ ಬರೆದಿದ್ದಾರೆ. ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವ ಆರ್ಯವೈಶ್ಯರನ್ನು ತೆರಿಗೆ ವಂಚಕರು, ಸುಳ್ಳು ಬುರುಕರು, ಮೋಸಗಾರರು, ಕಳ್ಳ ವ್ಯಾಪಾರಿಗಳು ಎಂದೆಲ್ಲ ಜರೆದಿದ್ದಾರೆ. ಅವರಿಗೆ ಬದ್ಧಿಭ್ರಮಣೆಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ವಿವಾದಾತ್ಮಕ ಬರಹಗಳಿಂದಾಗಿ ಐಲಯ್ಯ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡಿದ್ದಾರೆ. ಜನಾಂಗವನ್ನು ಕೀಳುಮಟ್ಟದಲ್ಲಿ ಅವಮಾನಿಸಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಮಾತನಾಡಿ, ‘ಮಹಾತ್ಮ ಗಾಂಧಿ ಅವರ ಬಗ್ಗೆಯೂ ಕೀಳುಮಟ್ಟದಲ್ಲಿ ಬರೆದಿದ್ದಾರೆ. ಬ್ರಿಟಿಷರು ನಮ್ಮನ್ನು ಗುಲಾಮರನ್ನಾಗಿ ಮಾಡಿ ಆಳ್ವಿಕೆ ನಡೆಸಿದ್ದು ಸರಿ ಎಂದು ಬರೆಯುವ ಮೂಲಕ ದೇಶದ್ರೋಹ ಎಸಗಿದ್ದಾರೆ. ಕೆಂಚಯ್ಯ ಅವರಿಗೆ ಶಿಕ್ಷೆ ಆಗಲೇಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.