ADVERTISEMENT

ನಿರ್ದೇಶಕ ಎಸ್‌.ನಾರಾಯಣ್ ವಿರುದ್ಧದ ಸಮನ್ಸ್‌ಗೆ ತಡೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 19:57 IST
Last Updated 21 ಸೆಪ್ಟೆಂಬರ್ 2017, 19:57 IST

ಬೆಂಗಳೂರು: ‘ಹಣ ಮರುಪಾವತಿ ಮಾಡಿಲ್ಲ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಎಸ್.ನಾರಾಯಣ್‌ ವಿರುದ್ಧ ನಗರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾರಿಗೊಳಿಸಿದ್ದ ಸಮನ್ಸ್‌ಗೆ ಹೈಕೋರ್ಟ್ ತಡೆ ನೀಡಿದೆ.

ಸಮನ್ಸ್‌ ರದ್ದುಗೊಳಿಸಲು ಕೋರಿ ನಾರಾಯಣ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ಪೀಠವು ಗುರುವಾರ ವಿಚಾರಣೆ ನಡೆಸಿತು.

ಅರ್ಜಿದಾರರ ವಕೀಲ ಶಂಕರಪ್ಪ, ‘ತಮಿಳುನಾಡು ಮೂಲದ ನಿರ್ಮಾಪಕ ಸಿ.ಕಲ್ಯಾಣ್ ಅವರು, ನಾರಾಯಣ್‌ ನಿರ್ದೇಶನದ ಕನ್ನಡ ಚಿತ್ರವೊಂದಕ್ಕೆ ₹ 50 ಲಕ್ಷ ಬಂಡವಾಳ ತೊಡಗಿಸಿದ್ದರು. ಆದರೆ ನಿರ್ಮಾಪಕರು ಚಿತ್ರೀಕರಣದ ಅರ್ಧದಲ್ಲೇ ಚಿತ್ರ ನಿರ್ಮಾಣದಿಂದ ಹಿಂದೆ ಸರಿದಿದ್ದರು. ಇದರಿಂದ ಹಣ ಮರು ಪಾವತಿ ಮಾಡುವಂತೆ ನಿರ್ದೇಶಕರಿಗೆ ಕೋರಿದ್ದರು. ಇದಕ್ಕೆ ಒಪ್ಪಿದ್ದ ನಾರಾಯಣ್, ಹಣ  ಹಿಂದಿರುಗಿಸಿದ್ದಾರೆ. ಆದರೆ, ಕಲ್ಯಾಣ್  ಈ ಸಂಗತಿಯನ್ನು ಮುಚ್ಚಿಟ್ಟು, ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಜುಲೈ 9ರಂದು ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಅದನ್ನು ರದ್ದುಪಡಿಸಬೇಕು’ ಎಂದು ಕೋರಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.