ADVERTISEMENT

ನೌಕರರ ಕಾಯಂ: ತೆಂಗಿನ ನಾರಿನ ನಿಗಮ ಅಧ್ಯಕ್ಷರು

​ಪ್ರಜಾವಾಣಿ ವಾರ್ತೆ
Published 30 ಜುಲೈ 2015, 19:39 IST
Last Updated 30 ಜುಲೈ 2015, 19:39 IST

ಬೆಂಗಳೂರು: ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮದಲ್ಲಿ 15 ವರ್ಷ ಗಳಿಗಿಂತ ಹೆಚ್ಚು ಕಾಲ ಕಾರ್ಯ ನಿರ್ವಹಿಸಿ ರುವ ನೌಕರರನ್ನು ಕಾಯಂಗೊಳಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸ ಲಾಗಿದೆ ಎಂದು ನಿಗಮದ ಅಧ್ಯಕ್ಷ ಕಡೂರು ಸಿ.ನಂಜಪ್ಪ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಅವರು, ‘ನಷ್ಟದಲ್ಲಿದ್ದ ನಿಗಮವನ್ನು ಲಾಭದ ಹಳಿಗೆ ತರಲು ನಾನು ಅಧ್ಯಕ್ಷನಾದ ಮೇಲೆ ಹತ್ತಾರು ಕ್ರಮಗಳನ್ನು ತೆಗೆದುಕೊಂಡಿದ್ದೇನೆ’ ಎಂದರು.

‘ರಾಜ್ಯ ಸರ್ಕಾರಿ ಸೇವೆಯಲ್ಲಿದ್ದು ಅಕಾಲಿಕ ಮರಣ ಹೊಂದಿದರೆ ಮೃತ ನೌಕರನ ಅಂತ್ಯಕ್ರಿಯೆಗೆ ₨ 5000 ಪರಿಹಾರ ಕೊಡಲಾಗುತ್ತದೆ. ಆದರೆ ನಿಗಮದಲ್ಲಿ ಈ ಅವಕಾಶ ಇಲ್ಲ. ನಿಗಮದಲ್ಲಿ 28 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಬಿ.ಎಸ್‌. ನಾಗರಾಜ್‌ ಅವರು ಇತ್ತೀಚೆಗೆ ಅಕಾಲಿಕ ಮರಣ ಹೊಂದಿದರು. ಅವರ ಕುಟುಂಬದ ಆರ್ಥಿಕ ಸ್ಥಿತಿಯನ್ನು ಮನಗಂಡು ನಾನು ವೈಯಕ್ತಿಕವಾಗಿ ₨ 25,000 ಪರಿಹಾರ ಧನವನ್ನು ನೀಡಿದ್ದೇನೆ’ ಎಂದರು.

‘ಮೃತ ನೌಕರರ ಅಂತ್ಯಕ್ರಿಯೆಗಾಗಿ ರಾಜ್ಯ ಸರ್ಕಾರವು ನೀಡುವ ಸೌಲಭ್ಯವನ್ನು ನಿಗಮದ ನೌಕರರಿಗೂ ವಿಸ್ತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.