ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣ ಸಂಬಂಧ ನಟಿ ಪೂಜಾ ಗಾಂಧಿ ಅವರ ತಂದೆ ಪವನ್ ಅವರ ಬಂಧನಕ್ಕೆ ನಗರದ 27ನೇ ಎಸಿಎಂಎಂ ನ್ಯಾಯಾಲಯವು ವಾರಂಟ್ ಜಾರಿ ಮಾಡಿದೆ.
ಜಯನಗರ ಹಾಗೂ ಬನಶಂಕರಿಯಲ್ಲಿರುವ ‘ಆದೀಶ್ವರ’ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆಯಲ್ಲಿ ಪವನ್ ಅವರು ₹8 ಲಕ್ಷ ಮೌಲ್ಯದ ವಸ್ತುಗಳನ್ನು ಖರೀದಿಸಿದ್ದರು. ಅದಕ್ಕೆ ಪ್ರತಿಯಾಗಿ ಚೆಕ್ ನೀಡಿದ್ದರು. ಅದನ್ನು ಬ್ಯಾಂಕ್ಗೆ ಹಾಕಿದ್ದಾಗ ಬೌನ್ಸ್ ಆಗಿತ್ತು. ಆ ಸಂಬಂಧ ಮಳಿಗೆಯ ವ್ಯವಸ್ಥಾಪಕರು, ದೂರು ನೀಡಲು ಹೋದಾಗ ಪೊಲೀಸರು ಸ್ವೀಕರಿಸಿರಲಿಲ್ಲ. ಬಳಿಕ ಅವರು ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ಹೂಡಿದ್ದರು.
‘ಪವನ್ ಅವರ ಬಂಧನಕ್ಕೆ ಪ್ರಯತ್ನಿಸುತ್ತಿದ್ದೇವೆ. ಅವರು ಮುಂಬೈಗೆ ವಾಸವನ್ನು ಬದಲಿಸಿರುವುದು ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದರು.
ಈ ಬಗ್ಗೆ ಮಾತನಾಡಿದ ಪೂಜಾ, ‘ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನಾನು, ತಂಗಿ ಹಾಗೂ ತಾಯಿ ಪ್ರತ್ಯೇಕವಾಗಿ ವಾಸವಿದ್ದೇವೆ. ತಂದೆಯೊಂದಿಗೆ ಒಡನಾಟವಿಟ್ಟುಕೊಂಡಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.