ADVERTISEMENT

ಪ್ರಧಾನಿ ಮೋದಿಯಿಂದ ದೇವೇಗೌಡರಿಗೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 29 ಮೇ 2015, 20:07 IST
Last Updated 29 ಮೇ 2015, 20:07 IST

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಅವರನ್ನು ಮಾತುಕತೆ, ಕುಶಲೋಪರಿಗೆ ಆಹ್ವಾನಿಸಿದ್ದಾರೆ. ಈ ಆಹ್ವಾನ ಸ್ವೀಕರಿಸಿರುವ ದೇವೇಗೌಡ ಅವರು, ‘ಜೂನ್‌ 3 ಅಥವಾ 4ರಂದು ಭೇಟಿಯಾಗುವೆ’ ಎಂದು ತಿಳಿಸಿದ್ದಾರೆ.

‘ನನ್ನ ಆಪ್ತ ಕಾರ್ಯದರ್ಶಿಗೆ ಒಂದು ವಾರದ ಹಿಂದೆ ಪ್ರಧಾನಿ ಕಚೇರಿಯಿಂದ ಕರೆ ಬಂತು. ಪ್ರಧಾನಿ ಮೋದಿ ಅವರು ನಿಮ್ಮೊಟ್ಟಿಗೆ ಕೆಲವು ವಿಷಯಗಳ ಬಗ್ಗೆ ಚರ್ಚಿಸಲು, ಒಟ್ಟಿಗೇ ಚಹಾ ಸೇವಿಸಲು ಉತ್ಸುಕರಾಗಿದ್ದಾರೆ. ಯಾವಾಗ ಬರುತ್ತೀರಿ ತಿಳಿಸಿ ಎಂಬ ಸಂದೇಶ ದೊರೆಯಿತು’ ಎಂದು ದೇವೇಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಆ ಸಂದರ್ಭದಲ್ಲಿ ನನ್ನ ಆರೋಗ್ಯ ತುಸು ಸರಿ ಇರಲಿಲ್ಲ. ಆದರೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ ಅವರನ್ನು ಮೋದಿ ಅವರು ಭೇಟಿಯಾದ ನಂತರ, ಪ್ರಧಾನಿ ಕಚೇರಿಯಿಂದ ನನಗೆ ಮತ್ತೆ ಕರೆ ಬಂತು. ಯಾವಾಗ ಅನುಕೂಲ ಆಗುತ್ತೋ ತಿಳಿಸಿ ಎಂದರು’ ಎಂದು ದೇವೇಗೌಡ ಹೇಳಿದರು.

ಭೂಸ್ವಾಧೀನ ತಿದ್ದುಪಡಿ ಮಸೂದೆ ಸೇರಿದಂತೆ ವಿವಿಧ ಆಡಳಿತಾತ್ಮಕ ವಿಷಯಗಳ ಬಗ್ಗೆ ಮೋದಿ ಅವರ ಜೊತೆ ಚರ್ಚಿಸುವ ಉದ್ದೇಶ ಇದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.