ADVERTISEMENT

ಫೋರ್ಟಿಸ್‌ ಆಸ್ಪತ್ರೆಯಲ್ಲಿ ಪಿತ್ತಜನಕಾಂಗ ಕಸಿ ಕೇಂದ್ರ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2017, 19:38 IST
Last Updated 17 ಫೆಬ್ರುವರಿ 2017, 19:38 IST
ಬೆಂಗಳೂರು: ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟಿಸ್  ಆಸ್ಪತ್ರೆಯಲ್ಲಿ ‘ಹೆಪಟೊಬಿಲಿಯರಿ ವಿಜ್ಞಾನಗಳು ಮತ್ತು ಪಿತ್ತಜನಕಾಂಗ ಕಸಿ ಕೇಂದ್ರ’ವನ್ನು ಸ್ಥಾಪಿಸಲಾಗಿದೆ.
 
ಸಿಂಗಪುರದ ಏಷ್ಯನ್‌ ಅಮೆರಿಕನ್ ಟ್ರಾನ್ಸ್‌ಪ್ಲಾಂಟ್‌ ಕೇಂದ್ರದ ಕಾರ್ಯನಿರ್ವಾಹಕ ಅಧ್ಯಕ್ಷ ಡಾ. ಟ್ಯಾನ್ ಕೈ ಚಾಹ್‌ ಅವರು ಇದನ್ನು ಉದ್ಘಾಟಿಸಿದರು.
ಪಿತ್ತಜನಕಾಂಗ ರೋಗತಜ್ಞ ಡಾ. ಕಪಾಲಿ ನೀಲಮೇಕಂ ನೇತೃತ್ವದಲ್ಲಿ ಕೇಂದ್ರವು ಕಾರ್ಯನಿರ್ವಹಿಸಲಿದೆ. ಕೇಂದ್ರದಲ್ಲಿ ಪಿತ್ತಜನಕಾಂಗ ರೋಗತಜ್ಞರು, ಕಸಿ ಶಸ್ತ್ರಚಿಕಿತ್ಸಾ ತಜ್ಞರು ಮತ್ತು ತರಬೇತಿ ಪಡೆದಿರುವ ಬಹು ವಿಭಾಗೀಯ ತಂಡ ಇರುತ್ತದೆ.
 
ಫೋರ್ಟಿಸ್  ಆಸ್ಪತ್ರೆಯ ಪ್ರಾದೇಶಿಕ ನಿರ್ದೇಶಕ ಡಾ. ಮನೀಶ್ ಮಟ್ಟು ಮಾತನಾಡಿ, ‘ಪಿತ್ತಜನಕಾಂಗ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಅವರಿಗೆ ಒಂದೇ ಸೂರಿನಡಿ ಸಮಗ್ರ ಆರೈಕೆ ಒದಗಿಸಲು ಕೇಂದ್ರವನ್ನು ತೆರೆಯಲಾಗಿದೆ. ಇಲ್ಲಿ ಸಂಕೀರ್ಣ ಪಿತ್ತಜನಕಾಂಗ ರೋಗಗಳ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.