ADVERTISEMENT

ಬೀನ್ಸ್‌ಗಿಂತ ಕೋಳಿ ಮಾಂಸ ಅಗ್ಗ!

ಹುರುಳಿಕಾಯಿ ಬೆಲೆ ಕೆ.ಜಿ.ಗೆ ₹ 180

​ಪ್ರಜಾವಾಣಿ ವಾರ್ತೆ
Published 3 ಮೇ 2016, 19:48 IST
Last Updated 3 ಮೇ 2016, 19:48 IST

ಶ್ರೀನಿವಾಸಪುರ (ಕೋಲಾರ ಜಿಲ್ಲೆ):  ಈಗ ಬೀನ್ಸ್‌ (ಹುರುಳಿಕಾಯಿ) ದಾಖಲೆ ಬೆಲೆಗೆ ಮಾರಾಟವಾಗುತ್ತಿದೆ. ಉತ್ತಮ ಗುಣಮಟ್ಟದ ಹುರುಳಿಕಾಯಿ ಚಿಲ್ಲರೆ ಬೆಲೆಯಲ್ಲಿ ಕೆ.ಜಿ.ಯೊಂದಕ್ಕೆ ₹160 ರಿಂದ ₹ 180ರ ವರೆಗೆ ಮಾರಾಟವಾಗುತ್ತಿದೆ.

ಯಾವುದೇ ಸಂತೆ ಅಥವಾ ಮಾರುಕಟ್ಟೆಯಲ್ಲಿ ಬೀನ್ಸ್‌ ಬೆಲೆ ವಿಚಾರಿಸಿದರೆ, ಕಾಲು ಕೆ.ಜಿ. ₹ 45 ಎಂದು ಹೇಳುತ್ತಾರೆ. ಅಪ್ಪಿತಪ್ಪಿಯೂ ಕೆ.ಜಿ.ಗೆ ಎಷ್ಟು ಬೆಲೆ ಎಂದು ಹೇಳುವುದಿಲ್ಲ.   ಬೀನ್ಸ್‌ಗಿಂತ ಕೋಳಿ ಮಾಂಸ ಅಗ್ಗ ಎಂಬುದು ಮಾಂಸಪ್ರಿಯರ ಮಾತು. ಒಂದು ಕೆ.ಜಿ ಕೋಳಿ ಮಾಂಸದ ಬೆಲೆ ₹ 140. ಬೀನ್ಸ್‌ ಬೆಲೆಗೆ ಹೋಲಿಸಿದರೆ ಕೋಳಿ ಮಾಂಸ ಅಗ್ಗವಲ್ಲವೇ ಎಂಬುದು ಅವರ ಪ್ರಶ್ನೆ.

ಮಾರುಕಟ್ಟೆ ಸುತ್ತಿದರೆ ಯಾವ ವ್ಯಾಪಾರಿಯ ಬಳಿಯೂ 5 ಕೆ.ಜಿ.ಗಿಂತ ಹೆಚ್ಚು ಬೀನ್ಸ್‌ ಸಿಗುವುದಿಲ್ಲ. ಮದುವೆ, ಮುಂಜಿ ಮಾಡುವವರನ್ನು ಹೊರತು ಪಡಿಸಿದರೆ ಯಾರೂ ಕಾಲು ಕೆ.ಜಿ.ಗಿಂತ ಹೆಚ್ಚು ಬೀನ್ಸ್‌ ಖರೀದಿಸುತ್ತಿಲ್ಲ. ಸಗಟು ಮಾರುಕಟ್ಟೆಯಲ್ಲಿ ಅದನ್ನು ಪಡೆಯ ಬೇಕಾದರೆ ಸಾಹಸ ಮಾಡಬೇಕು. ಬೇರೆ ತರಕಾರಿಗಳ ಜತೆ ಇರಲಿ ಎಂಬ ಉದ್ದೇಶ ದಿಂದ ಬೀನ್ಸ್‌ ಖರೀದಿಸಿ ತರುತ್ತಿದ್ದೇವೆ ಎನ್ನುತ್ತಾರೆ  ವ್ಯಾಪಾರಿ ಲಕ್ಷ್ಮಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.