ADVERTISEMENT

ಬ್ಯಾಂಕ್‌ ನೂತನ ಕಟ್ಟಡ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2015, 20:35 IST
Last Updated 29 ಮಾರ್ಚ್ 2015, 20:35 IST
ಕಮ್ಮವಾರಿ ಕ್ರೆಡಿಟ್ ಸಹಕಾರ ಸಂಘದ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು ಟೇಪ್‌ ಕತ್ತರಿಸಿದರು. ಬ್ಯಾಂಕಿನ ಉಪಾಧ್ಯಕ್ಷ ರಮೇಶ್‌ ಬಾಬು, ಅಧ್ಯಕ್ಷ ಟಿ.ಭದ್ರಾಚಲಂ ಮತ್ತು ಕೇಂದ್ರ ಸಚಿವ ಅನಂತಕುಮಾರ್ ಚಿತ್ರದಲ್ಲಿದ್ದಾರೆ
ಕಮ್ಮವಾರಿ ಕ್ರೆಡಿಟ್ ಸಹಕಾರ ಸಂಘದ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು ಟೇಪ್‌ ಕತ್ತರಿಸಿದರು. ಬ್ಯಾಂಕಿನ ಉಪಾಧ್ಯಕ್ಷ ರಮೇಶ್‌ ಬಾಬು, ಅಧ್ಯಕ್ಷ ಟಿ.ಭದ್ರಾಚಲಂ ಮತ್ತು ಕೇಂದ್ರ ಸಚಿವ ಅನಂತಕುಮಾರ್ ಚಿತ್ರದಲ್ಲಿದ್ದಾರೆ   

ಬೆಂಗಳೂರು: ಕಮ್ಮವಾರಿ ಕ್ರೆಡಿಟ್ ಸಹಕಾರ ಸಂಘದ ಬ್ಯಾಂಕಿನ ಹನುಮಂತ ನಗರ ಶಾಖೆಯ ನೂತನ ಕಟ್ಟಡವನ್ನು ಕೇಂದ್ರ  ಸಚಿವ ಅನಂತಕುಮಾರ್‌ ಅವರು ಭಾನುವಾರ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ಭದ್ರಾಚಲಂ ಅವರು, ‘1994ರಲ್ಲಿ 590 ಸದಸ್ಯರು ಮತ್ತು ರೂ11 ಲಕ್ಷ ಬಂಡವಾಳದೊಂದಿಗೆ ಆರಂಭವಾದ ಬ್ಯಾಂಕ್  ಇಂದು 4,500 ಸದಸ್ಯರು ಹಾಗೂ ರೂ12 ಕೋಟಿ ಷೇರು ಬಂಡವಾಳವನ್ನು ಹೊಂದಿದೆ’ ಎಂದು ಹೇಳಿದರು.

ಬ್ಯಾಂಕ್ ಉಪಾಧ್ಯಕ್ಷ ರಮೇಶ ಬಾಬು ಅವರು ಮಾತನಾಡಿ, ‘ಪ್ರಸ್ತುತ ಬ್ಯಾಂಕ್‌ ರೂ80 ಕೋಟಿ ಹೂಡಿಕೆ ಮಾಡಿದೆ. ರೂ60 ಕೋಟಿ ಸಾಲ ನೀಡಲಾಗಿದೆ. ರೂ75 ಕೋಟಿ ಬಂಡವಾಳವಿದೆ. ವಾರ್ಷಿಕ ರೂ 250 ಕೋಟಿ ವಹಿವಾಟು ನಡೆಸುತ್ತಿದೆ. ಕಳೆದ ಸಾಲಿನಲ್ಲಿ ರೂ4 ಕೋಟಿ ಲಾಭ ಗಳಿಸಿತ್ತು. ಈ ಬಾರಿ ಲಾಭದ ಪ್ರಮಾಣ ರೂ 6 ಕೋಟಿ ತಲುಪುವ ನಿರೀಕ್ಷೆಯಿದೆ. ಕಳೆದ ಮೂರು ವರ್ಷಗಳಲ್ಲಿ ಸದಸ್ಯರಿಗೆ ಶೇ 25ರಷ್ಟು ಲಾಭಾಂಶ  ನೀಡಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.