ADVERTISEMENT

ಬ್ರುಸೆಲ್ಲೊಸಿಸ್ ಮಾರಣಾಂತಿಕ ಅಲ್ಲ: ಸಚಿವ ಎ.ಮಂಜು

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2016, 20:10 IST
Last Updated 8 ಸೆಪ್ಟೆಂಬರ್ 2016, 20:10 IST
ಎ.ಮಂಜು
ಎ.ಮಂಜು   

ಬೆಂಗಳೂರು: ಜಾನುವಾರುಗಳಲ್ಲಿ ಕಾಣಿಸಿಕೊಂಡಿರುವ ಬ್ರುಸೆಲ್ಲೊಸಿಸ್ ಮಾರಣಾಂತಿಕ ಅಲ್ಲ ಮತ್ತು ರೋಗ ಪೀಡಿತ ಹಸುಗಳನ್ನು ಕೊಲ್ಲುವ ಅಗತ್ಯವಿಲ್ಲ ಎಂದು ಪಶುಸಂಗೋಪನಾ ಮತ್ತು ರೇಷ್ಮೆ ಸಚಿವ ಎ.ಮಂಜು ಹೇಳಿದರು.

‘ಕಾಯಿಲೆ ಬಗ್ಗೆ ಸಾರ್ವಜನಿಕರು ಆತಂಕಕ್ಕೆ ಒಳಗಾಗಬೇಕಿಲ್ಲ. ರೋಗ ಪೀಡಿತ ಹಸುಗಳ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ನಿರಾತಂಕವಾಗಿ ಸೇವಿಸಬಹುದು’ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೋಲಾರದಲ್ಲಿ ಶಾಸಕ ವರ್ತೂರು ಪ್ರಕಾಶ್‌ ಅವರ ಫಾರಂನಲ್ಲಿದ್ದ ಬ್ರುಸೆಲ್ಲಾ ರೋಗಾಣು ಸೋಂಕಿತ ಹಸುಗಳೂ ಸೇರಿದಂತೆ ರಾಜ್ಯದ ವಿವಿಧೆಡೆ ಒಟ್ಟು 915 ಹಸುಗಳ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ ಎಂದರು. ಸೋಂಕಿಗೆ ತುತ್ತಾದ ಹಸುಗಳನ್ನು ಆರೋಗ್ಯವಂತ ಹಸುಗಳಿಂದ ಪ್ರತ್ಯೇಕಿಸಿ ಚಿಕಿತ್ಸೆ ನೀಡಿದರೆ ಸಾಕು.

ಈ ಬಗ್ಗೆ ರೈತರು ಎಚ್ಚರ ವಹಿಸಬೇಕು. ಕರುಗಳನ್ನು ಹಾಕಿದ ಬಳಿಕ ಬರುವ ಸಾಮಾನ್ಯ ಕಾಯಿಲೆ ಇದಾಗಿದೆ. ರೋಗ ಪೀಡಿತ ಹಸುಗಳಿಗೆ ದಯಾ ಮರಣ ನೀಡಬೇಕಾಗಿಲ್ಲ. ಈ ಬಗ್ಗೆ ಅಪಪ್ರಚಾರ ನಡೆದಿದೆ. ಕುರಿಗಳು ಬ್ರುಸೆಲ್ಲಾ  ಸೋಂಕಿಗೆ ಗುರಿಯಾದರೆ, ಅದರ ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನಬ ಹುದು. ಇಲ್ಲವಾದರೆಸೋಂಕು ಮಾನವರಿಗೂ ಹಬ್ಬುವ ಸಾಧ್ಯತೆ ಇದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.