ADVERTISEMENT

ಮಂಜುನಾಥ ರೆಡ್ಡಿ ವಿರುದ್ಧ ವಾರಂಟ್‌

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 19:52 IST
Last Updated 14 ಮಾರ್ಚ್ 2017, 19:52 IST

ಬೆಂಗಳೂರು: ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಸುಳ್ಳು ಮಾಹಿತಿ ನೀಡಿದ ಪ್ರಕರಣ ಸಂಬಂಧ ಮಾಜಿ ಮೇಯರ್‌ ಮಂಜುನಾಥ ರೆಡ್ಡಿ ಅವರ ವಿರುದ್ಧ 6ನೇ ಎಸಿಎಂಎಂ ನ್ಯಾಯಾಲಯವು ಜಾಮೀನುರಹಿತ ವಾರಂಟ್‌ ಜಾರಿ ಮಾಡಿದೆ.

‘ನಾಮಪತ್ರ ಸಲ್ಲಿಸುವಾಗ ಪ್ಯಾನ್ ಕಾರ್ಡ್ ಸಂಖ್ಯೆ ಹಾಗೂ ನೋಟರಿ ರಿಜಿಸ್ಟಾರ್ ಸಂಖ್ಯೆಯನ್ನು ಉಲ್ಲೇಖಿಸಿಲ್ಲ. ಇದರಿಂದ ಜನಪ್ರತಿನಿಧಿ ಕಾಯ್ದೆ– 1951ರ 125 (ಎ) ಉಲ್ಲಂಘನೆಯಾಗಿದೆ. ನಾಮಪತ್ರದಲ್ಲಿ ಈ ಎರಡು ವಿಷಯಗಳ ಕುರಿತು ಮಾಹಿತಿ ನೀಡದೆ ಕಾನೂನು ಉಲ್ಲಂಘಿಸಲಾಗಿದೆ’ ಎಂದು ಆರೋಪಿಸಿ ಹೈಕೋರ್ಟ್‌ನ ವಕೀಲ ಎನ್‌.ಪಿ. ಅಮೃತೇಶ್‌ ಖಾಸಗಿ ದೂರು ದಾಖಲಿಸಿದ್ದರು.

ಇದರ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಮಂಜುನಾಥ ರೆಡ್ಡಿ ವಿರುದ್ಧ ಸಮನ್ಸ್‌ ಜಾರಿ ಮಾಡಿತ್ತು. ಬಳಿಕ ಅವರು ಜಾಮೀನು ಪಡೆದಿದ್ದರು. ಆದರೆ, ನಂತರ ನಡೆದ ವಿಚಾರಣೆಗಳಿಗೆ ಅವರು ಹಾಜರಾಗರಲಿಲ್ಲ. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಜಾಮೀನುರಹಿತ ವಾರಂಟ್‌ ಜಾರಿ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.