ADVERTISEMENT

ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 20:23 IST
Last Updated 13 ನವೆಂಬರ್ 2017, 20:23 IST

ಬೆಂಗಳೂರು: ‘ಮಕ್ಕಳ ಹಕ್ಕುಗಳ ರಕ್ಷಣೆಗೆ ಕಾನೂನಿನ ನೆರವು ಕಲ್ಪಿಸುವಂತೆ ಒತ್ತಾಯಿಸಿ ಅಸೋಸಿಯೇಷನ್‌ ಆಫ್‌ ನಾನ್‌ ಕಸ್ಟೋಡಿಯಲ್ ಪೇರೆಂಟ್ಸ್ ಆಫ್‌ ಇಂಡಿಯಾ ಸಂಸ್ಥೆಯು ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಇದೇ 14 ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಸತ್ಯಾಗ್ರಹ ಆಯೋಜಿಸಿದೆ’ ಎಂದು ಸಂಸ್ಥೆಯ ಸಂಚಾಲಕ ಸುಜಿತ್ ದೇಶಪಾಂಡೆ ತಿಳಿಸಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಳಿಗ್ಗೆ 10.30 ರಿಂದ ಸಂಜೆ 6.30 ರವರೆಗೆ ಮಕ್ಕಳ ಹಕ್ಕುಗಳ ಕುರಿತು ಉಪನ್ಯಾಸ, ಸಂವಾದ ಮತ್ತು ಕಾರ್ಯಾಗಾರ ನಡೆಯಲಿದೆ’ ಎಂದರು.

‘ತಂದೆ, ತಾಯಿ ಮತ್ತು ಕುಟುಂಬದ ಪ್ರೀತಿಯನ್ನು ಪಡೆಯುವುದು ಪ್ರತಿ ಮಗುವಿನ ಹಕ್ಕು. ಆದರೆ, ತಂದೆ ತಾಯಿಗಳು ವಿಚ್ಛೇದನವಾದಾಗ ಮಗು ಆ ಪ್ರೀತಿಯಿಂದ ವಂಚಿತವಾಗುತ್ತದೆ. ಇದರಿಂದ ಮಗುವಿನ ಹಕ್ಕು ಉಲ್ಲಂಘನೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಮಗುವಿನ ಹಕ್ಕಿನ ರಕ್ಷಣೆಗೆ ಪೂರಕವಾಗುವಂತಹ ಕಾನೂನು ರೂಪಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.