ADVERTISEMENT

ಮಸಾಜ್‌ ನೆಪದಲ್ಲಿ ಚಿತ್ರೀಕರಣ ಆರೋಪ!

​ಪ್ರಜಾವಾಣಿ ವಾರ್ತೆ
Published 24 ಮೇ 2017, 19:38 IST
Last Updated 24 ಮೇ 2017, 19:38 IST
ಬೆಂಗಳೂರು: ಮಸಾಜ್ ಮಾಡುವ ನೆಪದಲ್ಲಿ ಮಹಿಳೆಯರ ವಿಡಿಯೊ ಚಿತ್ರೀಕರಿಸಲಾಗುತ್ತಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ಮಂಗಳವಾರ ಯಲಹಂಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 
 
ಯಲಹಂಕದ ಮಾರುತಿ ನಗರದಲ್ಲಿರುವ  ಆಯುರ್ವೇದಿಕ್ ಕ್ಲಿನಿಕ್‌ ವಿರುದ್ಧ ಮಹಿಳೆ ಆರೋಪಿಸಿದ್ದು, ಪೊಲೀಸರು ತಕ್ಷಣ ಅಲ್ಲಿಗೆ ಹೋಗಿ ಪರಿಶೀಲಿಸಿದ್ದಾರೆ. ಆದರೆ, ಸ್ಥಳದಲ್ಲಿ ಯಾವುದೇ ಕ್ಯಾಮೆರಾ ಪತ್ತೆಯಾಗಿಲ್ಲ. 
 
ಮೇ 23ರ ರಾತ್ರಿ ಮಹಿಳೆಯೊಬ್ಬರು ಮಸಾಜ್‌ ಮಾಡಿಸಿಕೊಳ್ಳಲು ಹೋಗಿದ್ದರು. ಮಸಾಜ್ ಮಾಡುವ ಕೊಠಡಿಯ ಕಿಟಕಿಗೆ ತೆಳ್ಳನೆಯ ಕರ್ಟನ್ ಅಳವಡಿಸಿದ್ದರ ಬಗ್ಗೆ ಮಹಿಳೆ ಆಕ್ಷೇಪ ವ್ಯಕ್ತಪಡಿಸಿದ್ದರು.
 
ಇಲ್ಲಿಗೆ ಯಾರೂ ಬರುವುದಿಲ್ಲ ಎಂದು ಮಹಿಳಾ ಸಿಬ್ಬಂದಿ ಉತ್ತರಿಸಿದ್ದರು ಎಂದು ಮಹಿಳೆ ತಿಳಿಸಿದ್ದಾಗಿ ಪೊಲೀಸರು ಹೇಳಿದರು. ಇಷ್ಟಕ್ಕೆ ಸಮಾಧಾನಗೊಳ್ಳದ ಮಹಿಳೆ ಕರ್ಟನ್ ಸರಿಸಿ ನೋಡಿದಾಗ ಅಲ್ಲಿ ಕ್ಯಾಮರಾ ಇರುವುದು ಪತ್ತೆಯಾಗಿದೆ.
 
ಬಳಿಕ ಠಾಣೆಗೆ ಮಾಹಿತಿ ನೀಡಿದರು. ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅವರು ತಿಳಿಸಿದರು. ಆರೋಪ ಮಾಡಿದ ಮಹಿಳೆ ದೂರು ದಾಖಲಿಸಿಲ್ಲ. ಸಿಬ್ಬಂದಿಯ ವಿಚಾರಣೆ ವೇಳೆ ಸುಳಿವು ಸಿಕ್ಕರೆ, ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಜರುಗಿಸುತ್ತೇವೆ ಎಂದು ಅವರು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.