ADVERTISEMENT

‘ಮಸೀದಿ ಧ್ವಂಸಕ್ಕೆ ಪ್ರಚೋದನೆ ನೀಡಿಲ್ಲ’

ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 4:55 IST
Last Updated 7 ಡಿಸೆಂಬರ್ 2017, 4:55 IST
ವಿಶ್ವೇಶತೀರ್ಥ ಸ್ವಾಮೀಜಿ
ವಿಶ್ವೇಶತೀರ್ಥ ಸ್ವಾಮೀಜಿ   

ಉಡುಪಿ: ‘ಬಾಬರಿ ಮಸೀದಿ ಧ್ವಂಸ ಮಾಡುವಂತೆ ಎಲ್ಲಿಯೂ ಯಾರಿಗೂ ಪ್ರಚೋದನೆ ನೀಡಿಲ್ಲ. ವಿನಾಕಾರಣ ನನ್ನ ಮೇಲೆ ಆರೋಪ ಮಾಡಲಾಗುತ್ತಿದೆ’ ಎಂದು ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಇಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘1992, ಡಿಸೆಂಬರ್‌ 6 ರಂದು ಏನಾಗುತ್ತದೆ ಎನ್ನುವ ಕಲ್ಪನೆ ಯಾರಿಗೂ ಇರಲಿಲ್ಲ. ಹಿಂದಿನ ದಿನ ರಾತ್ರಿ ಸರ್ವೋಚ್ಛ ಸಮಿತಿ ಸಭೆ ನಡೆಯಿತು. ಅದರಲ್ಲಿ ಸಾಂಕೇತಿಕ ಕರಸೇವೆ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿತ್ತು.ಸಾಂಕೇತಿಕ ಕರಸೇವೆ ಮಾಡುವುದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಕೇವಲ ಸ್ವಚ್ಛಗೊಳಿಸುವ ಕೆಲಸ ಬಿಟ್ಟರೆ ಬೇರೆ ಯಾವ ಕೆಲಸ ಮಾಡುವುದಿಲ್ಲ ಎಂದು ಪ್ರಧಾನಿಗೆ ನಾವು ಲಿಖಿತ ಹೇಳಿಕೆ ನೀಡಿದ್ದೆವು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT