ADVERTISEMENT

ಮೆಟ್ರೊ ಸುರಂಗ ಕಾರ್ಯ: ಜನ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2014, 20:04 IST
Last Updated 21 ಆಗಸ್ಟ್ 2014, 20:04 IST
ಸುರಂಗ ಕೊರೆಯುವ ಯಂತ್ರದ ಕಾರ್ಯಾಚರಣೆ ನಡೆಯುವ ಜಾಗದ ಮೇಲ್ಭಾಗದಲ್ಲಿ ಶಿಥಿಲಗೊಂಡ ಕಟ್ಟಡಗಳ ಬಳಿ ಜನರು ಓಡಾಡದಂತೆ ನೋಡಿಕೊಳ್ಳಲು ಕಾವಲು ಕಾಯುತ್ತಿರುವ  ಕಾರ್ಮಿಕ(ಎಡಚಿತ್ರ). ಚಿಕ್ಕಪೇಟೆಯ ಮಟನ್‌ ಮಾರ್ಕೆಟ್‌  ಬಳಿ ನೆಲದಾಳದಲ್ಲಿ ಸುರಂಗ ಕೊರೆಯುವ ಕಾಮಗಾರಿ ನಡೆದಿರುವ ಬಗ್ಗೆ ಬ್ಯಾರಿಕೇಡ್‌ ಮೇಲೆ ಎಚ್ಚರಿಕೆ ಸೂಚನೆಯನ್ನು ಹಾಕಿರುವುದು  (ಬಲಚಿತ್ರ)	–ಪ್ರಜಾವಾಣಿ ಚಿತ್ರಗಳು

ಬೆಂಗಳೂರು: ‘ನಮ್ಮ ಮೆಟ್ರೊ’ದ ಸುರಂಗ ನಿರ್ಮಾಣ ಕಾರ್ಯದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ­ವಾಗಿ ಚಿಕ್ಕಪೇಟೆಯ ಮಟನ್‌ ಮಾರ್ಕೆಟ್‌ ಬಳಿ ವಸತಿ ಗೃಹಗಳು ಸೇರಿದಂತೆ ಕೆಲ ಕಟ್ಟಡಗಳಿಂದ ಜನ­ರನ್ನು ತಾತ್ಕಾಲಿಕವಾಗಿ ಖಾಲಿ ಮಾಡಿಸಲಾಯಿತು.

ನೆಲ ಮಟ್ಟದಿಂದ 60 ಅಡಿಗಳಷ್ಟು ತಳಭಾಗದಲ್ಲಿ ‘ಸುರಂಗ ಕೊರೆಯುವ ಯಂತ್ರ’ (ಟಿಬಿಎಂ) ಸುರಂಗ ಕೊರೆ­ಯು­ವಾಗ ಮೇಲ್ಭಾಗದಲ್ಲಿರುವ ಹಳೆ ಮತ್ತು ಶಿಥಿಲ ಕಟ್ಟಡಗಳಿಗೆ ಹಾನಿ  ಹಾನಿ ಆಗಬಾರದೆಂಬ ಕಾರಣಕ್ಕೆ ಈ ಮುಂಜಾಗ್ರತೆ ವಹಿಸಲಾಗಿದೆ.

‘ಸುರಂಗ ಕಾಮಗಾರಿ ನಡೆಯುವ ಜಾಗದ ಮೇಲ್ಭಾಗದಲ್ಲಿ 10ರಿಂದ 15 ಚದರ ಮೀಟರ್‌ಗಳಷ್ಟು ವಿಸ್ತೀರ್ಣದ ಜಾಗವನ್ನು ಪ್ರಭಾವ ವಲಯ ಎಂದು ಗುರುತಿಸಲಾಗುತ್ತದೆ. ಆ ವಲಯದಲ್ಲಿ ಬರುವ ಕಟ್ಟಡಗಳು ಶಿಥಿಲಗೊಂಡಿದ್ದರೆ ಅಂತಹ ಕಟ್ಟಡಗಳಿಂದ ಮಾತ್ರ ಜನರನ್ನು ಸ್ಥಳಾಂತರಗೊಳಿಸ­ಲಾಗು­ವುದು’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ಮುಖ್ಯ ಎಂಜಿನಿ­ಯರ್‌ ಹೆಗ್ಗಾರಡ್ಡಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸುರಂಗ ನಿರ್ಮಿಸುವಾಗ ಕಟ್ಟಡಗಳಿಗೆ ಹಾನಿ ಆದರೆ ಅವುಗಳನ್ನು ಗುತ್ತಿಗೆದಾರರು ದುರಸ್ತಿ ಮಾಡಿಸಿ­ಕೊಡುತ್ತಾರೆ. ಸುರಂಗ ನಿರ್ಮಾಣ ಆದಂತೆಲ್ಲ ಟಿಬಿಎಂ ಮುಂದೆ ಸಾಗುತ್ತದೆ. ನಂತರ  ಕಟ್ಟಡಗಳನ್ನು ಅವುಗಳ ಮಾಲೀಕರ ಮರು ವಶಕ್ಕೆ ಒಪ್ಪಿಸಲಾಗುವುದು. ಇದೊಂದು ನಿಯಮಿತವಾಗಿ ನಡೆಯುವ ಕಾರ್ಯ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.