ADVERTISEMENT

‘ರಾಜಕಾರಣಿಗಳ ಶಿಫಾರಸಿನ ಮೇರೆಗೆ ವ್ಯಾಪಕ ವರ್ಗಾವಣೆ’

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 19:38 IST
Last Updated 21 ಮಾರ್ಚ್ 2018, 19:38 IST

ಬೆಂಗಳೂರು: ಕಾಂಗ್ರೆಸ್‌ ನಾಯಕರ ಶಿಫಾರಸ್ಸಿನ ಮೇಲೆ ಪೊಲೀಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದ್ದು, ಡಿಜಿಪಿ ನೀಲಮಣಿ ರಾಜು, ಎಡಿಜಿಪಿ ಗಗನ್‌ದೀಪ್‌, ನಗರ ಪೊಲೀಸ್‌ ಆಯುಕ್ತ ಟಿ.ಸುನಿಲ್‌ ಕುಮಾರ್‌ ಮತ್ತು ಎಡಿಜಿಪಿ ಪರಶಿವಮೂರ್ತಿ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿ, ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಕೇಂದ್ರ ಚುನಾವಣಾ ಆಯುಕ್ತರಿಗೆ ಪೊಲೀಸ್‌ ಮಹಾಸಂಘದ ಅಧ್ಯಕ್ಷ ವಿ.ಶಶಿಧರ್‌ ದೂರು ನೀಡಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ತಮಗೆ ಅನುಕೂಲ ಆಗಲಿ ಎಂಬ ಕಾರಣಕ್ಕೆ ರಾಜಕಾರಣಿಗಳು ತಮಗೆ ಬೇಕಾದ ಅಧಿಕಾರಿಗಳನ್ನು ಹಾಕಿಸಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಅಗತ್ಯ ಎಂದು ಅವರು ಹೇಳಿದ್ದಾರೆ.

ಚುನಾವಣೆಯಲ್ಲಿ ಭಾರಿ ಪ್ರಮಾಣದಲ್ಲಿ ಅಕ್ರಮ ನಡೆಸಲು ಕುತಂತ್ರಗಳನ್ನು ನಡೆಸಲಾಗುತ್ತಿದೆ. ಇದಕ್ಕಾಗಿ ಎಲ್ಲ ರೀತಿಗಳ ಶಕ್ತಿಗಳನ್ನು ಬಳಸಿಕೊಳ್ಳಲು ಕಾಂಗ್ರೆಸ್‌ ಮುಂದಾಗಿದೆ. ಇದೇ 3 ರಂದು ನಡೆದ ವರ್ಗಾವಣೆ ಇದಕ್ಕೆ ಅತ್ಯುತ್ತಮ ಉದಾಹರಣೆ. ಪೊಲೀಸ್‌ ಎಸ್ಟಾಬ್ಲಿಷ್‌ಮೆಂಟ್‌ ಬೋರ್ಡ್‌ ಕೂಡ ಕಾಂಗ್ರೆಸ್‌ ಶಾಸಕರು, ಮಂತ್ರಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಯಾರ ಶಿಫಾರಸು  ಅಧಿಕಾರಿ  ಎಲ್ಲಿಗೆ ವರ್ಗಾವಣೆ

ಸಚಿವ ಪ್ರಮೋದ್ ಮಧ್ವರಾಜ್ ಡಿವೈಎಸ್‌ಪಿ ಟಿ.ಅರ್‌.ಜೈಶಂಕರ್‌ ಉಡುಪಿ ಉಪವಿಭಾಗ

ಸಚಿವ ಎಚ್‌.ಆಂಜನೇಯ  ಡಿವೈಎಸ್‌ಪಿ ವಿಜಯಕುಮಾರ್‌  ಚಿತ್ರದುರ್ಗ.

ಆನಂದಸಿಂಗ್‌  ಡಿವೈಎಸ್‌ಪಿ ಸಲೀಂಪಾಶಾ ಹಂಪಿ.

ಶಾಸಕ ಜೆ.ಟಿ.ಪಾಟೀಲ ಡಿವೈಎಸ್ಪಿ ಎಸ್‌.ಬಿ.ಗಿರೀಶ್‌  ಬಾಗಲಕೋಟೆ ಉಪವಿಭಾಗ.

ವೀರಪ್ಪ ಮೊಯಿಲಿ  ಎಸಿಪಿ ಎಚ್‌.ಎನ್‌.ವೆಂಕಟೇಶ್‌  ಎಸಿಬಿ

ಮುಖ್ಯಮಂತ್ರಿ ಕಚೇರಿ  ಇನ್ಸ್‌ಪೆಕ್ಟರ್‌ ಸಿದ್ದೇಶ್ವರ ಹೊಸಪೇಟೆ ಟೌನ್‌ ಸರ್ಕಲ್

ಶಾಸಕ ಸುಧಾಕರ್‌  ಇನ್ಸ್‌ಪೆಕ್ಟರ್‌ ಬಾಳೆಗೌಡ ಚಿಕ್ಕಬಳ್ಳಾಪುರ

ಶಾಸಕ ಮೊಯ್ದಿನ್‌ ಬಾವಾ ಇನ್ಸ್‌ಪೆಕ್ಟರ್‌ ಕೆ.ಜಿ.ರಾಮಕೃಷ್ಣ ಸುರತ್ಕಲ್‌

ಶಾಸಕ ಮಕ್ಬುಲ್‌ ಭಗವಾನ್‌ ಇನ್ಸ್‌ಪೆಕ್ಟರ್‌ ಶ್ರೀಶೈಲ ಎಸ್‌.ಕೌಜಲಗಿ ಗೋಲಗುಂಬಜ್‌ ಸರ್ಕಲ್‌

ಸಚಿವ ವಿನಯ್ ಕುಲಕರ್ಣಿ ಇನ್ಸ್‌ಪೆಕ್ಟರ್‌ ಗಿರೀಶ್‌ ಎಸ್‌.ಬೋಜಣ್ಣನವರ್‌ ಹುಬ್ಬಳ್ಳಿ ಟೌನ್‌ ಠಾಣೆ

ಶಾಸಕ ವಿಜಯ್‌ಸಿಂಗ್‌ ಇನ್ಸ್‌ಪೆಕ್ಟರ್‌  ಮೊಹಮ್ಮದ್‌ ಇಸ್ಮಾಯಿಲ್‌  ಔರಾದ್‌ ಸರ್ಕಲ್‌ ಠಾಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.