ADVERTISEMENT

ರಾಜಧಾನಿಯಲ್ಲಿ ಶೇ 25ರಷ್ಟೂ ಮಳೆ ಇಲ್ಲ

​ಪ್ರಜಾವಾಣಿ ವಾರ್ತೆ
Published 27 ಜುಲೈ 2017, 20:20 IST
Last Updated 27 ಜುಲೈ 2017, 20:20 IST
ರಾಜಧಾನಿಯಲ್ಲಿ  ಶೇ 25ರಷ್ಟೂ ಮಳೆ ಇಲ್ಲ
ರಾಜಧಾನಿಯಲ್ಲಿ ಶೇ 25ರಷ್ಟೂ ಮಳೆ ಇಲ್ಲ   

ಬೆಂಗಳೂರು: ರಾಜಧಾನಿಯಲ್ಲಿ ಮುಂಗಾರು ಋತುವಿನ ಆರಂಭಿಕ ಎರಡು ತಿಂಗಳಲ್ಲಿ ಶೇ 25ರಷ್ಟೂ ಮಳೆಯಾಗಿಲ್ಲ.

ನಗರದಲ್ಲಿ ಮುಂಗಾರು ಅವಧಿಯಲ್ಲಿ (ಜೂನ್‌ 1ರಿಂದ ಸೆಪ್ಟೆಂಬರ್‌ 30) ಸರಾಸರಿ 549.6 ಮಿ.ಮೀ. ಮಳೆಯಾಗುತ್ತದೆ. ಈ ವರ್ಷದ ಮೊದಲ ಎರಡು ತಿಂಗಳಲ್ಲಿ ಕೇವಲ 60.5 ಮಿ.ಮೀ. ಮಳೆಯಾಗಿದೆ. 2016ರಲ್ಲಿ 401 ಮಿ.ಮೀ. ಹಾಗೂ 2015ರಲ್ಲಿ 179 ಮಿ.ಮೀ. ಮಳೆಯಾಗಿತ್ತು.

‘ಮುಂದಿನ ಎರಡು ತಿಂಗಳಲ್ಲಿ ಮುಂಗಾರು ಮಳೆ ಚುರುಕುಗೊಳ್ಳಲಿದೆ’ ಎಂದು ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರದ ನಿರ್ದೇಶಕ ಸುಂದರ್‌ ಎಂ. ಮೇತ್ರಿ ತಿಳಿಸಿದರು.

‘ಕರಾವಳಿ ಪ್ರದೇಶದಲ್ಲಿ ಕಡಿಮೆ ಒತ್ತಡ ಹಾಗೂ ಮೇಲ್ಮೈ ಸುಳಿಗಾಳಿಯು ನೈರುತ್ಯ ಮುಂಗಾರು ಮಳೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಈ ವರ್ಷ ಇವು ಸ್ಥಿರವಾಗಿರಲಿಲ್ಲ’ ಎಂದರು.

‘2014ರಲ್ಲಿ 694 ಮಿ.ಮೀ. ಮಳೆ ದಾಖಲಾಗಿತ್ತು. ಆದರೆ, 2015, 2016ರಲ್ಲಿ ಈ ಪ್ರಮಾಣ ಕುಸಿದಿತ್ತು. ಸಾಮಾನ್ಯವಾಗಿ ಈ ಋತುವಿನಲ್ಲಿ  ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತದೆ’ ಎಂದರು.

‘ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ನೈರುತ್ಯ ಮಳೆಯ ಅಂತ್ಯದಲ್ಲಿ (ಸೆಪ್ಟೆಂಬರ್‌) ಹಾಗೂ ಈಶಾನ್ಯ ಮುಂಗಾರಿನಲ್ಲಿ (ಅಕ್ಟೋಬರ್‌–ನವೆಂಬರ್‌) ಉತ್ತಮ ಮಳೆಯಾಗುತ್ತದೆ. ಹೀಗಾಗಿ ನಾವು ಭರವಸೆಯನ್ನು ಇಟ್ಟುಕೊಳ್ಳಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.