ADVERTISEMENT

ರಾಜ್ಯ ಸರ್ಕಾರಕ್ಕೆ ಬಿಐಎಎಲ್‌ ಪತ್ರ

‘ಮಾವಳ್ಳಿಪುರದಲ್ಲಿ ತ್ಯಾಜ್ಯ ವಿಲೇವಾರಿಗೆ ಅವಕಾಶ ನೀಡಬೇಡಿ’

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2014, 19:30 IST
Last Updated 16 ಸೆಪ್ಟೆಂಬರ್ 2014, 19:30 IST

ಬೆಂಗಳೂರು: ಯಲಹಂಕ ಸಮೀಪದ ಮಾವಳ್ಳಿಪುರದಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ರಾಜ್ಯ ಸರ್ಕಾರಕ್ಕೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್) ಪತ್ರ ಬರೆದಿದೆ.

ತ್ಯಾಜ್ಯ ವಿಲೇವಾರಿ ಮಾಡುವು-ದರಿಂದ ಪಕ್ಷಿಗಳ ಕಾಟ ಹೆಚ್ಚಾಗಿ ವಿಮಾನ ಹಾರಾಟಕ್ಕೆ ತೊಂದರೆಯಾಗ-ಬಹುದು ಎಂಬ ಆತಂಕದಿಂದ ಬಿಐಎಎಲ್‌ ಈ ಕ್ರಮ ಕೈಗೊಂಡಿದೆ.

ಡಿಸೆಂಬರ್‌ 1ರ ಬಳಿಕ ನಗರದ ಹೊರವಲಯದಲ್ಲಿರುವ ಮಂಡೂರಿಗೆ ತ್ಯಾಜ್ಯ ಸಾಗಣೆಯನ್ನು ರದ್ದುಗೊಳಿಸುತ್ತಿರುವುದರಿಂದ ಪರ್ಯಾಯ ಕ್ರಮವಾಗಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಮಾವಳ್ಳಿಪುರದಲ್ಲಿ ತ್ಯಾಜ್ಯ ವಿಲೇವಾರಿಗೆ ಅವಕಾಶ ಮಾಡಿಕೊಡುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು (ಕೆಎಸ್‌ಪಿಸಿಬಿ) ಸಂಪರ್ಕಿಸಿದೆ ಎನ್ನಲಾಗಿದೆ.

‘ಕಸ ವಿಲೇವಾರಿ ಕಾರಣ ಕೆಂಪೇ-ಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ-ದಲ್ಲಿ (ಕೆಐಎ) ಪಕ್ಷಿಗಳ ಹಾರಾಟ ಹೆಚ್ಚಾಗಿ ವಿಮಾನಗಳಿಗೆ ಬಡಿ-ಯುವ ಆತಂಕವಿರುತ್ತದೆ. ಸನಿಹದಲ್ಲಿ-ರುವ ಭಾರತೀಯ ವಾಯುಪಡೆ ನೆಲೆ (ಐಎಎಫ್‌) ಮೇಲೂ ಪರಿಣಾಮ ಉಂಟಾಗುವ ಭಯವಿದೆ’ ಎಂದು ವಿಮಾನ ನಿಲ್ದಾಣದ ಕಾರ್ಯಾಚರಣೆ ವಿಭಾಗದ ಅಧ್ಯಕ್ಷ ಹರಿ ಕೆ.ಮಾರರ್‌್ ಕಳವಳ ವ್ಯಕ್ತಪಡಿಸಿದರು.

ಯಶಸ್ವಿ ಹಸಿರು ಸ್ನೇಹಿ ಆಂದೋಲನ

‘ಹಸಿರು ಸ್ನೇಹಿ ಆಂದೋಲನ’ದಡಿ ಹೊಸ ಯೋಜನೆ ರೂಪಿಸಿರುವ ಕೆಐಎ, ವಿಮಾನ ನಿಲ್ದಾಣಕ್ಕೆ ಅಗತ್ಯವಾದ ನೀರು ಪೂರೈಸಿಕೊಳ್ಳುವ ಸಾಮರ್ಥ್ಯ ಹೊಂದುವ ಹಂತದಲ್ಲಿದೆ. ಕೆಐಎ ಆವರಣದಲ್ಲಿ ಪಾಳುಬಿದ್ದಿದ್ದ ಮೂರು ತೆರೆದ ಬಾವಿಗಳಲ್ಲಿ ಅಂತರ್ಜಲ ಮರುಪೂರಣ ಪ್ರಕ್ರಿಯೆಗೆ ಮುಂದಾಗಿದ್ದು, ಇದರಿಂದ ನೀರಿನ ಪ್ರಮಾಣ ಹೆಚ್ಚಳವಾಗಿರುವುದು ಕಂಡುಬಂದಿದೆ.

ಉದ್ಯಾನ, ಮಳೆ ನೀರುಕೊಯ್ಲು ವ್ಯವಸ್ಥೆಯ 315 ಗುಂಡಿಗಳು, ಕೊಳಚೆ ನೀರು ಸಂಸ್ಕರಣ ಘಟಕ ಮತ್ತು ಒಳಚರಂಡಿ ಯೋಜನೆ ಅಭಿವೃದ್ಧಿ ಈ ಆಂದೋ-ಲ-ನದ ಭಾಗವಾಗಿದೆ.

ADVERTISEMENT

ಈ ಹಿಂದೆ ಪಾಲಿಕೆಯು ಮಾವಳ್ಳಿ-ಪುರ-ದಲ್ಲಿ ಕಸ ವಿಲೇವಾರಿ ಮಾಡು-ತಿತ್ತು. ಆದರೆ, ಅಂತರ್ಜಲ ಮಾಲಿನ್ಯ-ವಾಗು-ತ್ತಿದೆ ಎಂದು ಆರೋಪಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದರಿಂದ ಈ ಪ್ರದೇಶದಲ್ಲಿ ಕಸ ವಿಲೇವಾರಿ ಮಾಡದಂತೆ 2012ರ ಜುಲೈನಲ್ಲಿ ಕೆಎಸ್‌ಪಿಸಿಬಿಯು ಸೂಚಿಸಿತ್ತು.

ವೈಮಾನಿಕ ದೂರವನ್ನು ಗಣನೆಗೆ ತೆಗೆದುಕೊಂಡರೆ ಮಾವಳ್ಳಿಪುರವು ಕೆಐಎನಿಂದ 18 ಕಿ.ಮೀ. ದೂರದಲ್ಲಿದೆ. ಐಎಎಫ್‌ ನೆಲೆ ಈ ಗ್ರಾಮಕ್ಕೆ ಮತ್ತಷ್ಟು ಸನಿಹವಾಗಿದೆ.

ಕೆಐಎಲ್‌ನಲ್ಲಿ ತ್ಯಾಜ್ಯ ಪ್ರಮಾಣ ಹೆಚ್ಚುತ್ತಿದ್ದರೂ ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಏಕೆಂದರೆ ಇಲ್ಲಿರುವ ಸಮರ್ಪಕ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ. ಅಂದಾಜು 9ರಿಂದ 10 ಟನ್‌ ಘನತ್ಯಾಜ್ಯ ಸಂಗ್ರಹವಾಗುತ್ತಿದ್ದು, ಅದನ್ನು ನಿಲ್ದಾಣದ ಆಂತರಿಕ ಘಟಕದಲ್ಲಿ ವಿಲೇವಾರಿ ಮಾಡಿ ಟೆರ್ರಾ ಸಂಸ್ಥೆಯ ತ್ಯಾಜ್ಯ ಸಂಸ್ಕರಣೆ ಘಟಕಕ್ಕೆ ಸಾಗಣೆ ಮಾಡಲಾಗುತ್ತಿದೆ. ಈ ಪ್ರಕ್ರಿಯೆಯು ಬಿಐಎಎಲ್‌ ಕೈಗೆತ್ತಿಕೊಂಡಿರುವ ‘ಹಸಿರು ಸ್ನೇಹಿ ಆಂದೋಲನ’ದ ಭಾಗವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.