ADVERTISEMENT

ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ಸಾಕ್ಷಿ ಮಲಿಕ್‌ ಕಣಕ್ಕೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2016, 19:46 IST
Last Updated 20 ಅಕ್ಟೋಬರ್ 2016, 19:46 IST

ನವದೆಹಲಿ: ರಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ ಬಳಿಕ ಸಾಕ್ಷಿ ಮಲಿಕ್‌ ಮೊದಲ ಬಾರಿಗೆ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲಿದ್ದಾರೆ.

ಉತ್ತರಪ್ರದೇಶದ ಗೊಂಡಾದಲ್ಲಿ ಅಕ್ಟೋಬರ್‌ 23ರಿಂದ  ಚಾಂಪಿಯನ್‌ಷಿಪ್‌ ನಡೆಯಲಿದೆ. 175 ಅಧಿಕಾರಿಗಳು 650 ಕುಸ್ತಿಪಟುಗಳು ಈ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ.

ಸಾಕ್ಷಿ 58 ಕೆ.ಜಿ ವಿಭಾಗದಲ್ಲಿ ರೈಲ್ವೇಸ್‌ ತಂಡವನ್ನು ಪ್ರತಿನಿಧಿಸಲಿದ್ದಾರೆ. ಬಜರಂಗ್‌ (65ಕೆ.ಜಿ), ಧರ್ಮೇಂದ್ರ ದಲಾಲ್‌ (130ಕೆ.ಜಿ) ತಂಡದಲ್ಲಿದ್ದಾರೆ. ಹರಿಯಾಣ ತಂಡದಲ್ಲಿ ಅಮಿತ್‌ ದಹಿಯಾ (57ಕೆ.ಜಿ), ಮೌಸಮ್‌ ಖಾತ್ರಿ (97ಕೆ.ಜಿ), ಅಮಿತ್‌ ಧನ್ಕರ್‌ (70ಕೆ.ಜಿ), ರವೀಂದರ್‌ ಸಿಂಗ್‌ (59ಕೆ.ಜಿ) ಇದ್ದಾರೆ.

ಒಲಿಂಪಿಯನ್‌ ರವೀಂದರ್‌ ಖಾತ್ರಿ (80ಕೆ.ಜಿ) ಹಾಗೂ ಸಂದೀಪ್‌ ತೋಮರ್‌ (75ಕೆ.ಜಿ) ಸರ್ವಿಸಸ್‌ ತಂಡವನ್ನು ಪ್ರತಿನಿಧಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.