ADVERTISEMENT

ರೇವಾ ವಿವಿಯಲ್ಲಿ ಉದ್ಯೋಗ ಮೇಳ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2016, 20:06 IST
Last Updated 27 ಆಗಸ್ಟ್ 2016, 20:06 IST
ಉದ್ಯೋಗಾಕಾಂಕ್ಷಿಗಳು ಸರತಿ ಸಾಲಿನಲ್ಲಿ ನಿಂತಿರುವ ದೃ ಶ್ಯ.
ಉದ್ಯೋಗಾಕಾಂಕ್ಷಿಗಳು ಸರತಿ ಸಾಲಿನಲ್ಲಿ ನಿಂತಿರುವ ದೃ ಶ್ಯ.   

ಬೆಂಗಳೂರು: ಉದ್ಯೋಗ ಮತ್ತು ತರಬೇತಿ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಗಳು, ಕಾಂಗ್ರೆಸ್‌ ಬ್ಯಾಟರಾಯನಪುರ ಕ್ಷೇತ್ರ ಘಟಕ ಹಾಗೂ ಕೆಬಿಜಿ ಸ್ವಯಂಸೇವಕರ ಸಂಘದ ಆಶ್ರಯದಲ್ಲಿ ಯಲಹಂಕದ ರೇವಾ ವಿಶ್ವವಿದ್ಯಾಲಯದಲ್ಲಿ ಶನಿವಾರ ಉದ್ಯೋಗ ಮೇಳ ಆಯೋಜಿಸಲಾಗಿತ್ತು.

ಮೇಳವನ್ನು ಉದ್ಘಾಟಿಸಿ ಮಾತನಾಡಿದ ಕೃಷಿ ಸಚಿವ ಕೃಷ್ಣಬೈರೇಗೌಡ, ಸಮಾಜದಲ್ಲಿ ಸಾಕಷ್ಟು ಮಂದಿ ನಿರುದ್ಯೋಗಿಗಳಿದ್ದು, ಹಲವಾರು ಕಂಪೆನಿಗ ಳೂ  ಉದ್ಯೋಗಾಕಾಂಕ್ಷಿಗಳ ಹುಡುಕಾಟದಲ್ಲಿರುತ್ತವೆ. ಇವರಿಬ್ಬರನ್ನೂ ಒಂದೆಡೆ ಸೇರಿಸಿದಾಗ ನಿರುದ್ಯೋಗಿಗಳಿಗೆ ಉದ್ಯೋಗ ಹಾಗೂ ಕಂಪೆನಿಗಳಿಗೆ ಉದ್ಯೋಗಿಗಳು ದೊರೆಯಲು ಅವಕಾಶವಾಗುತ್ತದೆ. ಈ ನಿಟ್ಟಿನಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಿಂದ ಇಂತಹ ಉದ್ಯೋಗ ಮೇಳಗಳ ನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ಮೇಳದಲ್ಲಿ 80 ಕಂಪೆನಿಗಳು ಭಾಗವಹಿಸಿದ್ದು, ಬೆಂಗಳೂರು ಸೇರಿ ದಂತೆ ರಾಜ್ಯದ ವಿವಿಧ ಜಿಲ್ಲೆಗಳ ಹಾಗೂ ಹೊರರಾಜ್ಯಗಳಿಂದ ಸುಮಾರು ನಾಲ್ಕು ಸಾವಿರ ಉದ್ಯೋಗಾಕಾಂಕ್ಷಿಗಳು ಬಂದಿದ್ದರು. ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಪ್ಲೊಮಾ, ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ಪದವಿಗಳಿಗೆ ಅನುಗುಣವಾಗಿ ಸಂದರ್ಶನ ನಡೆಸಲಾಗುತ್ತಿದ್ದು, ಮೇಳದಿಂದ ಕನಿಷ್ಠ ಒಂದು ಸಾವಿರ ಜನರಿಗೆ ಉದ್ಯೋಗ ದೊರೆಯುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಮೇಳದಲ್ಲಿ ಇನ್ಫೊಸಿಸ್‌, ವಿಮಾನ ನಿಲ್ದಾಣ, ಕೆನರಾಬ್ಯಾಂಕ್‌, ಕೋಟಕ್‌ ಮ ಹೀಂದ್ರ, ಎಚ್‌ಡಿಎಫ್‌ಸಿ ಬ್ಯಾಂಕ್‌, ಎಕ್ಸಿಸ್‌ ಬ್ಯಾಂಕ್‌, ಸ್ವಿಜ್ಜಿ, ಟಪ್ಫೆ ಕಾಫೀ ಡೇ  ಸೇರಿದಂತೆ ವಿವಿಧ ಕಂಪೆನಿಗಳ ಪ್ರತಿನಿಧಿಗಳು ಭಾಗವಹಿಸಿ, ಉದ್ಯೋಗಾಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸಿ, ಸಂದರ್ಶನ ನಡೆಸಿದರು. ಕೆಲವು ಅಭ್ಯರ್ಥಿಗಳನ್ನು ಉದ್ಯೋಗಕ್ಕೆ ಆಯ್ಕೆಮಾಡಿಕೊಂಡು ಸ್ಥಳದಲ್ಲೆ ಆದೇಶಪತ್ರ ವಿತರಿಸಿ, ಇನ್ನೂ ಕೆಲವರಿಗೆ ಕಂಪೆನಿಯ ಕಚೇರಿಗೆ ಸಂದರ್ಶನಕ್ಕೆ ಬರಲು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.