ADVERTISEMENT

ರೌಡಿ ನಾಗರಾಜ್‌ ಪ್ರಕರಣ: ತನಿಖಾಧಿಕಾರಿ ಬದಲು

​ಪ್ರಜಾವಾಣಿ ವಾರ್ತೆ
Published 4 ಮೇ 2017, 19:41 IST
Last Updated 4 ಮೇ 2017, 19:41 IST
ರೌಡಿ ನಾಗರಾಜ್‌ ಪ್ರಕರಣ: ತನಿಖಾಧಿಕಾರಿ ಬದಲು
ರೌಡಿ ನಾಗರಾಜ್‌ ಪ್ರಕರಣ: ತನಿಖಾಧಿಕಾರಿ ಬದಲು   

ಬೆಂಗಳೂರು: ರೌಡಿ ವಿ.ನಾಗರಾಜ್‌ನ ಶ್ರೀರಾಮಪುರದ ಮನೆಯಲ್ಲಿ ₹14.8 ಕೋಟಿಯ ರದ್ದಾದ ನೋಟುಗಳು ಪತ್ತೆಯಾದ ಪ್ರಕರಣದ ತನಿಖಾಧಿಕಾರಿಯನ್ನಾಗಿ ಎಸಿಪಿ ರವಿಕುಮಾರ್‌ ಅವರನ್ನು ಗುರುವಾರ ನೇಮಕ ಮಾಡಲಾಗಿದೆ.

ಆತನ ಮನೆಯ ಮೇಲೆ ದಾಳಿ ನಡೆದು 20 ದಿನಗಳಾಗಿದ್ದು, ಇದುವರೆಗೂ ತನಿಖೆಯಲ್ಲಿ ಪ್ರಗತಿ ಕಂಡುಬಂದಿಲ್ಲ. ಅದೇ ಕಾರಣಕ್ಕಾಗಿ ಹೆಣ್ಣೂರು ಠಾಣೆಯ ಇನ್‌ಸ್ಪೆಕ್ಟರ್‌ ಶ್ರೀನಿವಾಸ್‌ ಅವರನ್ನು  ತನಿಖಾ ತಂಡದಿಂದ ಕೈಬಿಡಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್‌ ಹೇಮಂತ್‌ ನಿಂಬಾಳ್ಕರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT