ADVERTISEMENT

ವಿದೇಶಿ ಪ್ರವಾಸಿಗರ ಸಂಖ್ಯೆ ಶೇ 43ರಷ್ಟು ಇಳಿಕೆ

ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದ ವಿದೇಶಿಗರ ಸಂಖ್ಯೆ ಶೂನ್ಯ

ಆರ್‌.ಜೆ.ಯೋಗಿತಾ
Published 17 ಫೆಬ್ರುವರಿ 2017, 19:40 IST
Last Updated 17 ಫೆಬ್ರುವರಿ 2017, 19:40 IST
ವಿದೇಶಿ ಪ್ರವಾಸಿಗರ ಸಂಖ್ಯೆ ಶೇ 43ರಷ್ಟು ಇಳಿಕೆ
ವಿದೇಶಿ ಪ್ರವಾಸಿಗರ ಸಂಖ್ಯೆ ಶೇ 43ರಷ್ಟು ಇಳಿಕೆ   
ಬೆಂಗಳೂರು: ನಗರಕ್ಕೆ ಭೇಟಿ ನೀಡುತ್ತಿರುವ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಶೇ 43.35 ಇಳಿಕೆ ಕಂಡುಬಂದಿದೆ. 2015ಕ್ಕೆ ಹೋಲಿಸಿದರೆ ಅರ್ಧದಷ್ಟು ವಿದೇಶಿ ಪ್ರವಾಸಿಗರು ಕಡಿಮೆಯಾಗಿದ್ದಾರೆ. 
 
‘ಹೀಗೆ ಏಕಾಏಕಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿರುವುದಕ್ಕೆ ನಿರ್ಧಷ್ಟ ಕಾರಣಗಳು ಇಲ್ಲ. ಆದರೆ, ಅಧಿಕ ಮುಖಬೆಲೆ ನೋಟು ರದ್ದತಿ ಕ್ರಮ ಪ್ರವಾಸೋದ್ಯಮದ ಮೇಲೆ ಭಾರಿ ಪರಿಣಾಮ ಬೀರಿದೆ’ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.
 
‘ನಗರದಲ್ಲಿ ಅಕ್ಟೋಬರ್‌ನಿಂದ ಫೆಬ್ರುವರಿವರೆಗೆ ಪ್ರವಾಸೋದ್ಯಮಕ್ಕೆ ಉತ್ತಮ ಕಾಲ. ನೋಟು ರದ್ದತಿ ಕ್ರಮದಿಂದ ನವೆಂಬರ್‌, ಡಿಸೆಂಬರ್‌ನಲ್ಲಿ ಉದ್ಯಮಕ್ಕೆ ಭಾರಿ ನಷ್ಟವಾಗಿತ್ತು. ಈಗ ಉದ್ಯಮ ಚೇತರಿಕೆ ಕಾಣುತ್ತಿದ್ದೆ’ ಎಂದು ಪ್ರವಾಸ ಆಯೋಜಕರು ತಿಳಿಸಿದರು.
 
‘ವಿದೇಶಿ ಪ್ರವಾಸಿಗರಿಂದ ನಮ್ಮ ಉದ್ಯಮಕ್ಕೆ ಹೆಚ್ಚು ಲಾಭವಾಗುತ್ತದೆ. ಆದರೆ ಕಳೆದ ವರ್ಷದಲ್ಲಿ ಹೆಚ್ಚು ವಿದೇಶಿಗರು ನಗರಕ್ಕೆ ಭೇಟಿ ನೀಡಿಲ್ಲ. ಇದು ಉದ್ಯಮಕ್ಕೆ ಹೊಡೆತ ಬಿದ್ದಿದೆ. ಪ್ರಸಕ್ತ ವರ್ಷದಲ್ಲಿ ವಿದೇಶಿಗರನ್ನು ಸೆಳೆಯಲು ಪ್ರವಾಸೋದ್ಯಮ ಇಲಾಖೆ ಏನಾದರೂ ಕ್ರಮಕೈಗೊಳ್ಳಬೇಕು’ ಎಂದು ಕ್ಯಾಬ್‌ ಚಾಲಕ ಮಹಂತೇಶ್‌ ಒತ್ತಾಯಿಸಿದರು.
 
**
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.