ADVERTISEMENT

ವಿದ್ಯಾರ್ಥಿಗಳಿಗಾಗಿ ಬದುಕಿ: ಶಿಕ್ಷಕರಿಗೆ ಕಲಾಂ ಕರೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2015, 20:31 IST
Last Updated 30 ಮಾರ್ಚ್ 2015, 20:31 IST
ವಿಜಯ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಬೆಳ್ಳಿಹಬ್ಬ ಸಮಾರಂಭದಲ್ಲಿ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್‌ ಕಲಾಂ  ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ವಿಜಯ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಬೆಳ್ಳಿಹಬ್ಬ ಸಮಾರಂಭದಲ್ಲಿ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್‌ ಕಲಾಂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.   

ಬೆಂಗಳೂರು:  ‘ನಿಮ್ಮ ಜೀವನವನ್ನು ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಮುಡಿಪಾಗಿಡಿ. ಅವರಿಗಾಗಿ ಬದುಕಿರಿ’ ಎಂದು ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಶಿಕ್ಷಕರಿಗೆ ಸಲಹೆ ನೀಡಿದರು.

ಜಯನಗರದ ವಿಜಯ ಕಾಲೇಜಿನ ಬೆಳ್ಳಿಹಬ್ಬ ಸಮಾರಂಭದಲ್ಲಿ  ಸೋಮ ವಾರ ಮಾತನಾಡಿದ ಅವರು,   ‘ಶಿಕ್ಷಕರು  ಕೇವಲ ಹೆಚ್ಚು ಅಂಕ ಗಳಿಸಿದ  ವಿದ್ಯಾರ್ಥಿ ಗಳ ಬಗ್ಗೆಯಷ್ಟೇ ಗಮನ ಹರಿಸದೆ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳ ಬಗ್ಗೆಯೂ ಗಮನ ಕೊಡಬೇಕು. ಕಲಿಕೆಯಲ್ಲಿ ಹಿಂದೆ ಇರುವ ವಿದ್ಯಾರ್ಥಿಗಳನ್ನು ಮುಂದೆ ತಂದರೆ ಅದು ಸಂಸ್ಥೆಯ ಮಹತ್ವದ ಸಾಧನೆ ಎಂದರು.

2020ರ ವೇಳೆಗೆ ಭಾರತದಲ್ಲಿ ಯುವಕರ ಸಂಖ್ಯೆ 80 ಕೋಟಿಯಾಗಲಿದೆ. ಯುವ ಶಕ್ತಿಯನ್ನು ಸರಿಯಾದ ಮಾರ್ಗ ದಲ್ಲಿ ಮುನ್ನಡೆಸುವ ಕಾರ್ಯ  ಇಂದಿನಿಂದಲೇ ಆರಂಭವಾಗಬೇಕು. ಯುವಕರು ದೇಶದ ಭವಿಷ್ಯವನ್ನು ಉಜ್ವಲಗೊಳಿಸುವತ್ತ  ಚಿಂತಿಸಬೇಕು. ಗುರಿಯನ್ನು ಸಾಧಿಸುವ ಛಲ ಬೆಳೆಸಿಕೊಳ್ಳಬೇಕು ಎಂದರು.

ಜಗತ್ತಿನ ಸಾಧಕರೆಲ್ಲ ಸಾಮಾನ್ಯ ವರ್ಗದಿಂದಲೇ ಬಂದವರು. ವಿಶೇಷ ವಾದ ಸಾಧನೆ ಮಾಡುವ ಗುರಿ ಇರ ಬೇಕು. ಅದನ್ನು ಸಾಧಿಸಲು ಪರಿಶ್ರಮ ಪಡಬೇಕು  ಎಂದು ಸಲಹೆ ನೀಡಿದರು.

*ಪ್ರಾಥಮಿಕ ಶಾಲಾ ಶಿಕ್ಷಕರು ಪ್ರತಿಯೊಬ್ಬರ ಬದುಕಿನಲ್ಲಿ ಮರೆಯಲಾರದ ವ್ಯಕ್ತಿಗಳು. ನಾನು ಪಂಚಾಯತ್  ಶಾಲೆಯಲ್ಲಿಯೇ ವ್ಯಾಸಂಗ ಮಾಡಿದ್ದು.  ವಿದ್ಯೆ ಕಲಿಸಿದ  ಗುರುಗಳನ್ನು ಇಂದಿಗೂ ಮರೆತಿಲ್ಲ.
ಎ.ಪಿ.ಜೆ. ಅಬ್ದುಲ್‌ ಕಲಾಂ, ಮಾಜಿ ರಾಷ್ಟ್ರಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.