ADVERTISEMENT

ವಿದ್ಯಾರ್ಥಿನಿಗೆ ಮುತ್ತು ಸಹಪಾಠಿ ಬಂಧನ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2018, 19:57 IST
Last Updated 11 ಮಾರ್ಚ್ 2018, 19:57 IST

ಬೆಂಗಳೂರು: ಖಾಸಗಿ ಕಾಲೇಜೊಂದರ ತರಗತಿಯಲ್ಲಿ ವಿದ್ಯಾರ್ಥಿನಿಗೆ ಮುತ್ತು ಕೊಟ್ಟಿದ್ದ ಆರೋಪದಡಿ, ಆಕೆಯ ಸಹಪಾಠಿ ಪಿಂಕೇಶ್ (19) ಎಂಬಾತನನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಸ್ಥಳೀಯ ನಿವಾಸಿಯಾದ ಆರೋಪಿ, ಕಾಲೇಜಿಗೆ ಸೇರಿದಾಗಿನಿಂದಲೂ ಸಂತ್ರಸ್ತೆಯನ್ನು ಕಾಡಿಸುತ್ತಿದ್ದ. ಶನಿವಾರ ಮಧ್ಯಾಹ್ನ ತರಗತಿ ಮುಗಿದ ಬಳಿಕ ಯುವತಿಯೊಬ್ಬಳೇ ಓದುತ್ತ ಕುಳಿತುಕೊಂಡಿದ್ದಳು. ಅದನ್ನು ಗಮನಿಸಿ ಆರೋಪಿ ಮುತ್ತು ಕೊಟ್ಟಿದ್ದ. ನಂತರ ಯುವತಿ, ಅಳುತ್ತಲೇ ಪ್ರಾಂಶುಪಾಲರ ಬಳಿ ಹೋಗಿ ಅಳಲು ತೋಡಿಕೊಂಡಿದ್ದಳು ಎಂದು ಪೊಲೀಸರು ತಿಳಿಸಿದರು.

‘ಯುವತಿ ಹಾಗೂ ಪ್ರಾಂಶುಪಾಲರ ಹೇಳಿಕೆ ಪಡೆದುಕೊಂಡಿದ್ದೆವು. ಅದರ ಆಧಾರದಲ್ಲಿ ಲೈಂಗಿಕ ದೌರ್ಜನ್ಯ (ಐಪಿಸಿ 354) ಆರೋಪದಡಿ ಪಿಂಕೇಶ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದೇವೆ’ ಎಂದರು.

ADVERTISEMENT

‘ಆರೋಪಿ ಹಾಗೂ ಸಂತ್ರಸ್ತೆ ಒಂದೇ ತರಗತಿಯಲ್ಲಿ ಓದುತ್ತಿದ್ದರು. ನಿತ್ಯವೂ ಆಕೆಯನ್ನು ಹಿಂಬಾಲಿಸುತ್ತಿದ್ದ.
ಅದಕ್ಕೆ ಕೆಲ ಸ್ನೇಹಿತರು ಸಹಕಾರ ನೀಡಿದ್ದರು ಎಂಬುದು ಗೊತ್ತಾಗಿದೆ. ಅವರಿಂದಲೂ ಹೇಳಿಕೆ ಪಡೆಯಬೇಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.