ADVERTISEMENT

ಶಾಲೆಗಳಿಗೆ ನೀರು ಶುದ್ಧೀಕರಣ ಉಪಕರಣ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2017, 20:22 IST
Last Updated 20 ಸೆಪ್ಟೆಂಬರ್ 2017, 20:22 IST
ಮರ್ಫಿಟೌನ್‌ನ ಸರ್ಕಾರಿ ತಮಿಳು ಹಿರಿಯ ಪ್ರಾಥವಿಕ ಶಾಲೆಗಳ ಮುಖ್ಯ ಶಿಕ್ಷಕರಿಗೆ ದಿನೇಶ್‌ ಗರ್ಗ್‌ ಉಪಕರಣ ವಿತರಿಸಿದರು.
ಮರ್ಫಿಟೌನ್‌ನ ಸರ್ಕಾರಿ ತಮಿಳು ಹಿರಿಯ ಪ್ರಾಥವಿಕ ಶಾಲೆಗಳ ಮುಖ್ಯ ಶಿಕ್ಷಕರಿಗೆ ದಿನೇಶ್‌ ಗರ್ಗ್‌ ಉಪಕರಣ ವಿತರಿಸಿದರು.   

ಬೆಂಗಳೂರು: ಪ್ರೆಸ್ಟೀಜ್‌ ಕ್ಲೀನ್‌ ಹೋಮ್‌ ಸಂಸ್ಥೆಯ ವತಿಯಿಂದ ನಾಲ್ಕು ಸರ್ಕಾರಿ ಶಾಲೆಗಳಿಗೆ ನೀರು ಶುದ್ಧೀಕರಣ ಘಟಕವನ್ನು ಬುಧವಾರ ವಿತರಿಸಲಾಯಿತು. ಇದರ ಲಾಭವನ್ನು 40 ಶಿಕ್ಷಕರು ಹಾಗೂ 350 ವಿದ್ಯಾರ್ಥಿಗಳು ಪಡೆಯಲಿದ್ದಾರೆ.

ಸರ್ಕಾರಿ ತೆಲುಗು ಹಿರಿಯ ಪ್ರಾಥವಿಕ ಶಾಲೆ, ಬಿಬಿಎಂಪಿ ಬಾಲಕಿಯರ ಪ್ರೌಢಶಾಲೆ, ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ತಮಿಳು ಹಿರಿಯ ಪ್ರಾಥವಿಕ ಶಾಲೆಗಳ ಮುಖ್ಯ ಶಿಕ್ಷಕರಿಗೆ ಟಿಟಿಕೆ ಪ್ರೆಸ್ಟೀಜ್‍ನ ಉಪಾಧ್ಯಕ್ಷ ದಿನೇಶ್ ಗರ್ಗ್ ಇದನ್ನು ವಿತರಿಸಿದರು.

‘ಇದು ವಿದ್ಯುಚ್ಛಕ್ತಿ ಇಲ್ಲದೇ ಕಾರ್ಯನಿರ್ವಹಿಸುತ್ತದೆ ಹಾಗೂ ಬ್ಯಾಕ್ಟೀರಿಯಾ, ವೈರಸ್‌ಗಳನ್ನು ನಿಷ್ಕ್ರೀಯಗೊಳಿಸಿ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುತ್ತದೆ’ ಎಂದು ಗರ್ಗ್ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.