ADVERTISEMENT

ಸುಳ್ಳು ಹೇಳಿದ ಓಲಾ ಚಾಲಕ!

​ಪ್ರಜಾವಾಣಿ ವಾರ್ತೆ
Published 26 ಮೇ 2018, 19:30 IST
Last Updated 26 ಮೇ 2018, 19:30 IST

ಬೆಂಗಳೂರು: ಓಲಾ ಕ್ಯಾಬ್‌ ಚಾಲಕ ಎತ್ತಿಕೊಂಡು ಹೋಗಿದ್ದ, ಚಿತ್ರನಟಿ ಪರೂಲ್‌ ಯಾದವ್‌ ಅವರ ದುಬಾರಿ ಬೆಲೆಯ ವಾಚ್‌ ಅನ್ನು ಪೊಲೀಸರು ಪತ್ತೆಹಚ್ಚಿ ಮರಳಿಸಿದ ಪ್ರಕರಣ ಶನಿವಾರ ನಡೆದಿದೆ.

‘ನಟಿ ಪರೂಲ್‌ ಅವರು ಓಲಾ ಕ್ಯಾಬ್‌ನಲ್ಲಿ ನಗರದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿದ್ದರು. ಮಾರ್ಗ ಮಧ್ಯೆ ಕೆಲವೇ ನಿಮಿಷಗಳ ಕಾಲ ಅವರು ಕಾರಿನಿಂದ ಇಳಿದಿದ್ದರು. ಪುನಃ ಕಾರು ಹತ್ತಿದಾಗ ಕಾರಿನಲ್ಲಿ ವಾಚ್‌ ಇರಲಿಲ್ಲ. ಈ ಬಗ್ಗೆ ಅವರು ಕಾರು ಚಾಲಕನನ್ನು ಕೇಳಿದ್ದಾಗ ಆತ ತನಗೆ ಗೊತ್ತಿಲ್ಲ ಎಂದಿದ್ದ‘ ಎಂದು ವಿಮಾನ ನಿಲ್ದಾಣದ ಪೊಲೀಸರು ತಿಳಿದ್ದಾರೆ.

‘ತಕ್ಷಣವೇ ಅವರು ಕ್ಯಾಬ್‌ ಕಂಪನಿಗೆ ಕರೆ ಮಾಡಿದ್ದಾರೆ. ಅವರು ಸರಿಯಾಗಿ ಸ್ಪಂದಿಸಿರಲಿಲ್ಲ. ಬಳಿಕ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು.  ಕಾರು ಚಾಲಕನಿಗೆ ಕರೆ ಮಾಡಿ, ಆತನನ್ನು ಠಾಣೆಗೆ ಕರೆಯಿಸಿಕೊಂಡು, ವಾಚ್‌ ಪಡೆದು, ನಟಿಗೆ ಮರಳಿಸಲಾಗಿದೆ‘ ಎಂದು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.