ADVERTISEMENT

ಸೈನಿಕರಿಂದ ನಿರ್ಗಮನ ಪಥಸಂಚಲನ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2014, 19:59 IST
Last Updated 24 ನವೆಂಬರ್ 2014, 19:59 IST
ನಗರದ ಪಯೋನಿಯರ್ ಸೇನಾ ತರಬೇತಿ ಕೇಂದ್ರದಲ್ಲಿ ಸೋಮವಾರ ನಡೆದ ಸೈನಿಕರ ಪಥಸಂಚಲನದಲ್ಲಿ ಕೇಂದ್ರದ ಉಪ ಪ್ರಧಾನ ನಿರ್ದೇಶಕ ಬ್ರಿಗೇಡಿಯರ್‌ ಎಸ್‌.ಕೆ.ಆಚಾರ್ಯ ಅವರು ವಿಜೇತರಿಗೆ ಪದಕ ಪ್ರದಾನ ಮಾಡಿದರು
ನಗರದ ಪಯೋನಿಯರ್ ಸೇನಾ ತರಬೇತಿ ಕೇಂದ್ರದಲ್ಲಿ ಸೋಮವಾರ ನಡೆದ ಸೈನಿಕರ ಪಥಸಂಚಲನದಲ್ಲಿ ಕೇಂದ್ರದ ಉಪ ಪ್ರಧಾನ ನಿರ್ದೇಶಕ ಬ್ರಿಗೇಡಿಯರ್‌ ಎಸ್‌.ಕೆ.ಆಚಾರ್ಯ ಅವರು ವಿಜೇತರಿಗೆ ಪದಕ ಪ್ರದಾನ ಮಾಡಿದರು   

ಬೆಂಗಳೂರು: ನಗರದಲ್ಲಿರುವ ಪಯೋನಿ­ಯರ್ ಸೇನಾ ತರಬೇತಿ ಕೇಂದ್ರದಲ್ಲಿ ತರಬೇತಿ ಪೂರೈಸಿದ 53 ಸೈನಿಕರ ಪಥಸಂಚಲನ ಸೋಮವಾರ ನಡೆಯಿತು.

ಸಮಾರಂಭದಲ್ಲಿ ತರಬೇತಿ ಕೇಂದ್ರದ ಉಪ ಪ್ರಧಾನ ನಿರ್ದೇಶಕ ಬ್ರಿಗೇಡಿಯರ್‌ ಎಸ್‌.ಕೆ.ಆಚಾರ್ಯ ಮಾತನಾಡಿ, ‘ಮೊದಲ ಮತ್ತು ಎರಡನೇ ಮಹಾಯುದ್ಧ, ಪಾಕಿಸ್ತಾನ ಹಾಗೂ ಚೀನಾ ದೇಶಗಳೊಂದಿಗಿನ ಯುದ್ಧಗಳಲ್ಲಿ ಭಾಗವಹಿಸುವ ಮೂಲಕ ದೇಶದ ಸೈನಿಕರು ಹೆಮ್ಮೆಯ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಹಿರಿ­ಯರು ನಡೆದ ಹಾದಿಯಲ್ಲಿಯೇ ಹೊಸದಾಗಿ ತರಬೇತಿ ಪೂರೈಸಿದ ಕಿರಿಯರು ಉತ್ತಮ ಸೇವೆ ಸಲ್ಲಿಸುತ್ತಾರೆ ಎನ್ನುವ ನಂಬಿಕೆ ನನಗಿದೆ’ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಆಚಾರ್ಯ ಅವರು ವಿಜೇತರಿಗೆ ಪ್ರಶಸ್ತಿಗಳನ್ನು ಮತ್ತು ಸೈನಿಕರ ಪಾಲಕರಿಗೆ ಗೌರವ ಪದಕಗಳನ್ನು ಪ್ರದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.