ADVERTISEMENT

‘ಇಂಟರ್‌ನೆಟ್‌ ಹೆದ್ದಾರಿಯಿದ್ದಂತೆ’

​ಪ್ರಜಾವಾಣಿ ವಾರ್ತೆ
Published 3 ಜೂನ್ 2015, 20:05 IST
Last Updated 3 ಜೂನ್ 2015, 20:05 IST

ಬೆಂಗಳೂರು: ‘ಇಂಟರ್‌ನೆಟ್‌ ಎಂಬುದು ರಾಷ್ಟ್ರೀಯ ಹೆದ್ದಾರಿಯಿದ್ದಂತೆ. ಇಲ್ಲೂ ಸಹ ಹೆದ್ದಾರಿ ಮಾದರಿಯಲ್ಲಿ ದಟ್ಟಣೆಗಳು, ಅಪಘಾತಗಳು ಇರುತ್ತವೆ’ ಎಂದು ಮಾಹಿತಿ ತಂತ್ರಜ್ಞಾನದ ಅಂತರರಾಷ್ಟ್ರೀಯ ಸಂಸ್ಥೆಯ ಪ್ರಾಧ್ಯಾಪಕ ಡಾ.ವಿ. ಶ್ರೀಧರ್‌ ವಿಶ್ಲೇಷಿಸಿದರು.

ಬೆಂಗಳೂರು ವಿಜ್ಞಾನ ವೇದಿಕೆಯು ನ್ಯಾಷನಲ್‌ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ‘ನೆಟ್‌ ನ್ಯೂಟ್ರಾಲಿಟಿ (ಮುಕ್ತ ಅಂತರ್ಜಾಲ)’ ಬಗ್ಗೆ ಉಪನ್ಯಾಸ ನೀಡಿದರು.

‘ನೆಟ್‌ ನ್ಯೂಟ್ರಾಲಿಟಿಯಿಂದ ಆವಿಷ್ಕಾರ ಹಾಗೂ ಸ್ಪರ್ಧೆ ಹೆಚ್ಚುತ್ತದೆ. ಈ ಪರಿಕಲ್ಪನೆ 2003ರಲ್ಲಿ ಅಮೆರಿಕದಲ್ಲಿ ಚಾಲ್ತಿಗೆ ಬಂತು. ಆದರೆ, ಅಮೆರಿಕ ಸರ್ಕಾರ ಎರಡು ತಿಂಗಳ ಹಿಂದೆಯಷ್ಟೇ ಮುಕ್ತ ಅಂತರ್ಜಾಲ ಪರಿಕಲ್ಪನೆಯನ್ನು ಅಧಿಕೃತ ನೀತಿಯನ್ನಾಗಿ ಮಾಡಿಕೊಂಡಿತು. ಭಾರತದಲ್ಲಿ ನೆಟ್‌ ನ್ಯೂಟ್ರಾಲಿಟಿ ನೀತಿ ರೂಪಿಸುವ ಬಗ್ಗೆ  ಪ್ರಕ್ರಿಯೆಗಳು ಆರಂಭವಾಗಿವೆ’ ಎಂದರು.

‘ಈ ಸಂಬಂಧ ಟ್ರಾಯ್ ಮಾರ್ಚ್‌ 27ರಂದು ಸಲಹೆಗಳನ್ನು ಸ್ವೀಕರಿಸುವ ಪ್ರಕ್ರಿಯೆಗೆ ಚಾಲನೆ ನೀಡಿತು. ನೆಟ್‌ ನ್ಯೂಟ್ರಾಲಿಟಿ ಅಗತ್ಯ ಇದೆ ಎಂದು ಪ್ರತಿಪಾದಿಸಿ ಒಂದೇ ವಾರದಲ್ಲಿ 10 ಲಕ್ಷ ಮಂದಿ ಟ್ರಾಯ್‌ಗೆ ಇಮೇಲ್‌ ಕಳುಹಿಸಿದರು. ಜನರು ಹಾಗೂ ಟೆಲಿಕಾಂ ಕಂಪೆನಿಗಳ ಸಲಹೆ ಹಾಗೂ ಆಕ್ಷೇಪಣೆಗಳನ್ನು ಸ್ವೀಕರಿಸಿ ಟ್ರಾಯ್‌ ಸರ್ಕಾರಕ್ಕೆ ಶಿಫಾರಸು ಮಾಡಲಿದೆ. ಬಳಿಕ ಸರ್ಕಾರ ನೀತಿ ರೂಪಿಸಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.