ADVERTISEMENT

‘ಕನ್ನಡದ ದೀಪ ಬೆಳಗಲಿ’

​ಪ್ರಜಾವಾಣಿ ವಾರ್ತೆ
Published 27 ಜನವರಿ 2014, 19:28 IST
Last Updated 27 ಜನವರಿ 2014, 19:28 IST
ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನಗರದ ಸರ್ಕಾರಿ ರಾಮ್‌ ನಾರಾಯಣ್‌ ಚೆಲ್ಲಾರಾಂ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ‘ಪ್ರಾಚೀನ ಕಾವ್ಯ ರಸಗ್ರಹಣ ಶಿಬಿರ’ ದಲ್ಲಿ ಲೇಖಕ ಪ್ರೊ.ಅಶ್ವತ್ಥನಾರಾಯಣ, ಸಾಹಿತಿ ಅ.ರಾ.ಮಿತ್ರ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಅವರು ಪರಸ್ಪರ ಸಮಾಲೋಚನೆ ನಡೆಸಿದರು 	– ಪ್ರಜಾವಾಣಿ ಚಿತ್ರ

ಬೆಂಗಳೂರು: ‘ನಮ್ಮ ಎದೆಗೂಡಿನಲ್ಲಿ ಕನ್ನಡವನ್ನು ತುಂಬಿಕೊಂಡು, ಪ್ರತಿ ಕನ್ನಡಿಗರ ಹೃದಯದಲ್ಲಿ ಕನ್ನಡದ ದೀಪ­ವನ್ನು ಬೆಳಗಿಸಬೇಕಾದ ಅಗತ್ಯ­ವಿದೆ’ ಎಂದು ಸಾಹಿತಿ ಪ್ರೊ.ಅ.ರಾ.ಮಿತ್ರ ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನಗರದ ಸರ್ಕಾರಿ ರಾಮ್‌ ನಾರಾ­ಯಣ್‌ ಚೆಲ್ಲಾರಾಂ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಸೋಮ­ವಾರ ಆಯೋಜಿಸಿದ್ದ ‘ಪ್ರಾಚೀನ ಕಾವ್ಯ ರಸಗ್ರಹಣ ಶಿಬಿರ’ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹೊರಗಿನವರಿಗೆ, ಹೊರದೇಶ­ದವ­ರಿಗೆ ನಮ್ಮ ಭಾಷೆಯ ಬಗೆಗೆ ಪ್ರೀತಿ­ಯಿದೆ. ಆದರೆ, ನಮ್ಮವರಿಗೆ ನಮ್ಮ ಭಾಷೆ ಬಗ್ಗೆ ಅಭಿಮಾನವಿಲ್ಲ’ ಎಂದು ವಿಷಾದಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಮಾತ­ನಾಡಿ, ‘ಒಂದು ಭಾಷೆ ಬದುಕಿ­ನೊಂದಿಗೆ ಹೆಣೆದುಕೊಂಡಿರು­ತ್ತದೆ. ಒಂದು ಭಾಷೆ ನಾಶವಾದರೆ, ಅಲ್ಲಿನ ಸಂಸ್ಕೃತಿ, ಜನ­ಜೀವನವೂ ನಾಶ­ವಾಗುತ್ತದೆ’ ಎಂದರು.

‘ಬೇರೆ ರಾಜ್ಯ­ಗಳಿಗೆ ಹೋಲಿಸಿದರೆ, ನಮ್ಮ ರಾಜ್ಯದಲ್ಲಿ ಭಾಷೆಯ ಅನು­ಷ್ಠಾನ­ದಲ್ಲಿ ಸೋತಿದ್ದೇವೆ. ಇಂದು ಶಾಲೆಗಳಲ್ಲಿ, ಆಡಳಿತದಲ್ಲಿ ಕನ್ನಡ ಭಾಷೆ­ಯನ್ನು ಬಳಸಲು ಯಾರೂ ಇಷ್ಟ­ಪಡುವುದಿಲ್ಲ. ಆದರೆ, ಭಾರತ ರತ್ನ ಪಡೆದ ವಿಜ್ಞಾನಿ ಸಿ.ಎನ್‌.ಆರ್‌.ರಾವ್‌ ಅವರು ಕನ್ನಡ ಮಾಧ್ಯಮದಲ್ಲಿಯೇ ಓದಿ ಇಂತಹ ಸಾಧನೆಯನ್ನು ಮಾಡಿ­ದ್ದಾರೆ. ಅಂತಹವರು ಎಲ್ಲರಿಗೂ ಸ್ಫೂರ್ತಿ’ ಎಂದು ಹೇಳಿದರು.

‘ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಸತ್ವಯುತ ಕನ್ನಡ ಭಾಷೆಯು ಉಳಿದುಕೊಂಡಿದೆ. ಅಲ್ಲಿನ ನುಡಿಗಟ್ಟು, ಗಾದೆಗಳು ಇಂದಿಗೂ ಅರ್ಥಪೂರ್ಣ­ವಾಗಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.