ADVERTISEMENT

‘ತಂತ್ರಜ್ಞಾನ ಬೆಳೆದಂತೆ ಪರಿಸರಕ್ಕೆ ಹಾನಿ’

​ಪ್ರಜಾವಾಣಿ ವಾರ್ತೆ
Published 6 ಮೇ 2015, 20:30 IST
Last Updated 6 ಮೇ 2015, 20:30 IST

ಬೆಂಗಳೂರು: ‘ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆ ಪರಿಸರ ಹಾನಿಯ ಪ್ರಮಾಣವೂ ಹೆಚ್ಚುತ್ತಿದೆ’ ಎಂದು ಪರಿಸರತಜ್ಞ ಡಾ. ಎ.ಎನ್. ಯಲ್ಲಪ್ಪ ರೆಡ್ಡಿ  ಅಭಿಪ್ರಾಯಪಟ್ಟರು.

ರಾಜ್ಯ ವಿಜ್ಞಾನ ಪರಿಷತ್‌  ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ಆಶ್ರಯದಲ್ಲಿ  ಮೇ 22ರಿಂದ 26ರವರೆಗೆ ನಡೆಯಲಿರುವ 15ನೇ ಅಖಿಲ ಭಾರತ ಜನ ವಿಜ್ಞಾನ ಸಮ್ಮೇಳನಕ್ಕೆ ಪೂರ್ವಭಾವಿ ಯಾಗಿ ಮಂಗಳವಾರ  ವಿಜ್ಞಾನ ಭವನದಲ್ಲಿ ನಡೆದ ‘ಪಶ್ಚಿಮ ಘಟ್ಟಗಳ ಸಂರಕ್ಷಣೆ ಹಾಗೂ ಪರಿಸರ ಜಾಗೃತಿ’ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯ ವಿಜ್ಞಾನ ಪರಿಷತ್ತಿನ ಅಧ್ಯಕ್ಷ ಎಸ್.ವಿ ಸಂಕನೂರ ಅವರು ಮಾತನಾಡಿ, ‘ಮಾನವನ  ದುರಾಸೆಯಿಂದಾಗಿ ಪರಿಸರಕ್ಕೆ ಧಕ್ಕೆ ಯಾಗುತ್ತಿದೆ. ಪರಿಸರ ಹಾನಿಯನ್ನು ತಡೆಗಟ್ಟಲು ಸಂಘಟಿತ ಪ್ರಯತ್ನ ಅಗತ್ಯ’  ಎಂದರು. 

ರಾಜ್ಯ ವಿಜ್ಞಾನ ಪರಿಷತ್ತಿನ ಉಪಾಧ್ಯಕ್ಷ ಚಳ್ಳಕೆರೆ ಯರ್ರಿಸ್ವಾಮಿ,  ಕಾರ್ಯದರ್ಶಿ ಡಾ.ವಸುಂಧರಾ ಭೂಪತಿ, ಉಪಕಾರ್ಯದರ್ಶಿ                   ಪ್ರೇ ಮ್‌      ಕುಮಾರ್,   ಖಜಾಂಚಿ ಗಿರೀಶ್ ಬಿ ಕಡ್ಲೇ ವಾಡ,  ಭಾರತ ಜ್ಞಾನ ವಿಜ್ಞಾನ ಸಮಿ ತಿಯ ಕಾರ್ಯದರ್ಶಿಗಳಾದ  ಎನ್‌. ಪ್ರಭಾ,   ಚೇಗರೆಡ್ಡಿ  ಉಪಸ್ಥಿತರಿದ್ದರು.

ಆಕಾಶವಾಣಿಯ ವಿಜ್ಞಾನ ಕಾರ್ಯ ಕ್ರಮ ನಿರ್ವಾಹಕಿ ಸುಮಂಗಲಾ ಮುಮ್ಮಿ ಗಟ್ಟಿ, ಪರಿಸರವಾದಿ ಸಿ. ಯತಿ ರಾಜು,   ಹಿರಿಯ ವಿಜ್ಞಾನಿ  ಸೋಮ ಶೇಖರ್ ಬಿ.ಎಸ್   ವಿಷಯ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.