ADVERTISEMENT

‘ರಂಗಭೂಮಿಯ ಕಲೆ ಸದಾ ಜೀವಂತ’

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2015, 19:38 IST
Last Updated 28 ಫೆಬ್ರುವರಿ 2015, 19:38 IST
ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ರಂಗೋತ್ಸವ ಸಮಾರಂಭವನ್ನು ಸಾಹಿತಿ ಚಂದ್ರಶೇಖರ ಪಾಟೀಲ ಉದ್ಘಾಟಿಸಿದರು.
ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ರಂಗೋತ್ಸವ ಸಮಾರಂಭವನ್ನು ಸಾಹಿತಿ ಚಂದ್ರಶೇಖರ ಪಾಟೀಲ ಉದ್ಘಾಟಿಸಿದರು.   

ಕೆಂಗೇರಿ: ‘ಕಲಾವಿದನ ಬಿಂಬ ನೋಡು­ಗರ ನೇತ್ರದಲ್ಲಿರುತ್ತದೆ. ರಂಗಭೂಮಿ­ಯಲ್ಲಿ ಪಾತ್ರಧಾರಿ ಹಾಗೂ ಪ್ರೇಕ್ಷಕರಿ­ಬ್ಬರೂ ಪರಸ್ಪರ ಅವಲಂಬಿತರು. ಆದರೆ, ಇದು ಸಿನಿಮಾ ಹಾಗೂ ದೂರ­ದರ್ಶನ­ದಲ್ಲಿ ಇರುವುದಿಲ್ಲ. ರಂಗ­ಭೂಮಿಯ ಕಲೆ ಸದಾ ಜೀವಂತ­ವಾಗಿ­ರುತ್ತದೆ’ ಎಂದು ಸಾಹಿತಿ ಚಂದ್ರಶೇಖರ ಪಾಟೀಲ ಹೇಳಿದರು.

ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ನಡೆದ ರಂಗಕಿರಣ ಕಲಾವೇದಿಕೆಯ ರಂಗೋ­ತ್ಸವವನ್ನು ಉದ್ಘಾಟಿಸಿ ಮಾತ­ನಾ­­ಡಿದ ಅವರು, ‘ಭಗವದ್ಗೀತೆಯನ್ನು ಸುಡುವ ಮಾತು ಅವಿವೇಕ. ನಮಗೆ ಅರಿವಿನ ಬೆಳಕು ಬೇಕು. ಸುಡುವ ಬೆಂಕಿ ಅಲ್ಲ ಎಂದರು. ನಮ್ಮ ಚಿಂತನೆ ಹಾಗೂ ಕ್ರಿಯೆಗಳು ಬೆಳಕಾಗಬೇಕು’ ಎಂದರು.

ವಿಮರ್ಶಕ ಶಶಿಕಾಂತ್ ಯಡಹಳ್ಳಿ ‘ಬಹುತೇಕ ಯಶಸ್ವಿ ನಾಟಕಗಳೆಲ್ಲವೂ ಬಯಲು ರಂಗಮಂದಿರಗಳಲ್ಲಿ ನಡೆದ ದಾಖಲೆ ಇದೆ. ಬಯಲು ರಂಗ­ಮಂದಿ­ರಕ್ಕೆ ಪರಂಪರೆಯಿದೆ. ಕಾಲಾ­ನಂತ­ರ ರಂಗಭೂಮಿಗಳಾಗಿವೆ ಎಂದರು. ಡಾ. ಎಂ. ಬೈರೇಗೌಡ, ವಿಮರ್ಶಕ ಶಶಿಕಾಂತ್ ಯಡಹಳ್ಳಿ, ರಾಷ್ಟ್ರೀಯ ನಾಟಕ ಶಾಲಾ ನಿರ್ದೇಶಕ ಸಿ. ಬಸವ­ಲಿಂಗಯ್ಯ, ರೇಣುಕಾರೆಡ್ಡಿ, ಶಂಕರ ಹೂಗಾರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.