ADVERTISEMENT

‘ರಾಜಕೀಯ ಇಚ್ಛಾಶಕ್ತಿ ಅಗತ್ಯ’

‘ಸುಂದರ ನಗರ’ದ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2014, 19:30 IST
Last Updated 16 ಸೆಪ್ಟೆಂಬರ್ 2014, 19:30 IST
ವಿಶ್ವ ಸುಸ್ಥಿರ ಅಭಿವೃದ್ಧಿ ವೇದಿಕೆಯು ನಗರದ ಇಂಧನ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ (ಟಿಇಆರ್‌ಐ-– ಟೆರಿ) ಮಂಗಳವಾರ ಏರ್ಪಡಿಸಿದ್ದ ‘15 ನೇ ದೆಹಲಿ ಸುಸ್ಥಿರ ಅಭಿವೃದ್ಧಿ’ ಸಮಾವೇಶದಲ್ಲಿ ‘ಪ್ರಾದೇಶಿಕ ಸಂವಾದ–ಬೆಂಗಳೂರು’ ಕುರಿತು ಟೆರಿ ಪ್ರಧಾನ ನಿರ್ದೇಶಕ ಡಾ.ಆರ್‌.ಕೆ.ಪಚೌರಿ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಟೆರಿ ದಕ್ಷಿಣ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಪ್ರಣವ್‌  ದಾಸಗುಪ್ತ, ನಗರಾಭಿವೃದ್ಧಿ ಇಲಾಖೆಯ ನಿವೃತ್ತ ಕಾರ್ಯದರ್ಶಿ ಡಾ.ಎಂ.ರಾಮಚಂದ್ರನ್‌, ಬಿ ಪ್ಯಾಕ್‌ ಸಂಘಟನೆಯ ಕಾರ್ಯದರ್ಶಿ ಕೆ.ಜೈರಾಜ್‌ ಭಾಗವಹಿಸಿದ್ದರು                                        – ಪ್ರಜಾವಾಣಿ ಚಿತ್ರ
ವಿಶ್ವ ಸುಸ್ಥಿರ ಅಭಿವೃದ್ಧಿ ವೇದಿಕೆಯು ನಗರದ ಇಂಧನ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ (ಟಿಇಆರ್‌ಐ-– ಟೆರಿ) ಮಂಗಳವಾರ ಏರ್ಪಡಿಸಿದ್ದ ‘15 ನೇ ದೆಹಲಿ ಸುಸ್ಥಿರ ಅಭಿವೃದ್ಧಿ’ ಸಮಾವೇಶದಲ್ಲಿ ‘ಪ್ರಾದೇಶಿಕ ಸಂವಾದ–ಬೆಂಗಳೂರು’ ಕುರಿತು ಟೆರಿ ಪ್ರಧಾನ ನಿರ್ದೇಶಕ ಡಾ.ಆರ್‌.ಕೆ.ಪಚೌರಿ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಟೆರಿ ದಕ್ಷಿಣ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಪ್ರಣವ್‌ ದಾಸಗುಪ್ತ, ನಗರಾಭಿವೃದ್ಧಿ ಇಲಾಖೆಯ ನಿವೃತ್ತ ಕಾರ್ಯದರ್ಶಿ ಡಾ.ಎಂ.ರಾಮಚಂದ್ರನ್‌, ಬಿ ಪ್ಯಾಕ್‌ ಸಂಘಟನೆಯ ಕಾರ್ಯದರ್ಶಿ ಕೆ.ಜೈರಾಜ್‌ ಭಾಗವಹಿಸಿದ್ದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸುಂದರ ನಗರ’ದ ಕನಸು ನನಸಾಗಲು ಸುಸ್ಥಿರ ಅಭಿವೃದ್ಧಿ, ಬೃಹತ್‌ ಹಣಕಾಸು ವ್ಯವಸ್ಥೆ ಹಾಗೂ ಅತಿ ಮುಖ್ಯವಾಗಿ ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿದೆ ಎಂಬ ವಾದವು ‘15 ನೇ ದೆಹಲಿ ಸುಸ್ಥಿರ ಅಭಿವೃದ್ಧಿ’ ಸಮಾವೇಶದ ಅಂಗವಾಗಿ ನಡೆದ ಬೆಂಗಳೂರು ಕುರಿತ ಪ್ರಾದೇಶಿಕ ಸಂವಾದ ಕಾರ್ಯಕ್ರಮದಲ್ಲಿ ಕೇಳಿಬಂದಿತು.

ವಿಶ್ವ ಸುಸ್ಥಿರ ಅಭಿವೃದ್ಧಿ ವೇದಿಕೆಯು ನಗರದ ಇಂಧನ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ (ಟಿಇಆರ್‌ಐ-–ಟೆರಿ) ಮಂಗ--ಳ-ವಾರ ಕಾರ್ಯಕ್ರಮ  ಏರ್ಪಡಿಸಿತ್ತು.

ಇಂಧನ ಹಾಗೂ ಸಂಶೋಧನಾ ಸಂಸ್ಥೆಯ ಪ್ರಧಾನ ನಿರ್ದೇಶಕ ಡಾ.-ಆರ್‌.ಕೆ.-ಪಚೌರಿ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿ, ‘ಸುಸಜ್ಜಿತವಾದ ಕಟ್ಟಡಗಳಿಂದ ಮಾತ್ರ ಸುಂದರ ನಗರ ನಿರ್ಮಾಣವಾಗಲು ಸಾಧ್ಯವಿಲ್ಲ. ನಗರಕ್ಕೆ ಮೂಲಸೌಕರ್ಯ-ಗಳನ್ನು ಒದಗಿಸುವುದರ ಜತೆಗೆ ಒಟ್ಟು ಬೆಳವಣಿಗೆಗೆ ಒತ್ತು ನೀಡಬೇಕು. ನಗರದ ಸುಸ್ಥಿರ ಅಭಿವೃದ್ಧಿಗೆ ಗಮನ ನೀಡ-ಬೇಕಾಗಿದೆ’ ಎಂದರು.

‘ಕಟ್ಟಡ ನಿರ್ಮಾಣದ ಪರಿಕಲ್ಪನೆ ಬದಲಾಗಬೇಕಿದೆ. ಪ್ರಕೃತಿದತ್ತವಾಗಿರುವ ಶಕ್ತಿಗಳ ಬಳಕೆಯನ್ನು ಹೆಚ್ಚಿಸಲು ಪ್ರಯತ್ನ ಪಡಬೇಕಿದೆ. ಉದಾಹರಣೆಗೆ ಸೌರಶಕ್ತಿಯ ಹೆಚ್ಚಿನ ಬಳಕೆ, ಮಳೆ ನೀರು ಸಂಗ್ರಹಣೆ ಪದ್ಧತಿಯನ್ನು ಅನುಸರಿಸಿ ಕಟ್ಟಡಗಳನ್ನು ನಿರ್ಮಿಸಬೇಕಾಗಿದೆ’ ಎಂದು ಸಲಹೆ ನೀಡಿದರು.

‘ಬೆಂಗಳೂರಿನಲ್ಲಿ ಸಂಚಾರ ವ್ಯವಸ್ಥೆ-ಯೇ ಅತಿದೊಡ್ಡ ಸಮಸ್ಯೆಯಾಗಿದೆ. ಅದನ್ನು ಸುಧಾರಿಸುವ ಪ್ರಯತ್ನ ಮಾಡ-ಬೇಕಿದೆ. ದೇಶದ ಪ್ರತಿಯೊಂದು ನಗರ-ವನ್ನೂ ಸುಂದರ ನಗರವನ್ನಾಗಿಸಬೇಕಿದೆ’ ಎಂದು ಹೇಳಿದರು.

ನಗರಾಭಿವೃದ್ಧಿ ಇಲಾಖೆಯ ನಿವೃತ್ತ ಕಾರ್ಯದರ್ಶಿ ಡಾ.ಎಂ.ರಾಮ-ಚಂದ್ರನ್‌, ‘ಸುಂದರ ನಗರದ ನಿರ್ಮಾ-ಣಕ್ಕೆ ಒಂದು ಪ್ರಬಲವಾದ ರಾಜಕೀಯ ಇಚ್ಛಾಶಕ್ತಿಯ ಅಗತ್ಯತೆಯಿದೆ. ನಗರಾಭಿ-ವೃದ್ಧಿಗೆ ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರ ಕೈಗೊಂಡಿದ್ದ ಯೋಜನೆಗಳು ಅಷ್ಟಾಗಿ ಯಶಸ್ವಿಯಾಗಿಲ್ಲ. ನಗರದಲ್ಲಿ ತ್ಯಾಜ್ಯದ ಸಮಸ್ಯೆಗೆ ಇನ್ನೂ ಯಾವುದೇ ಪರಿಹಾರ ದೊರೆತಿಲ್ಲ. ಎಲ್ಲೆಂದರಲ್ಲಿ ಎಸೆಯುವ ತ್ಯಾಜ್ಯವು ನಗರದ ಪರಿಸರ-ವನ್ನು ಹಾಳು ಮಾಡುತ್ತಿದೆ. ಇದು-ವರೆಗೂ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಂಗಡಿಸಿ, ಸಂಸ್ಕರಿಸುವ ಪದ್ಧತಿಯೇ ಜಾರಿಯಾಗಿಲ್ಲ’ ಎಂದು ಹೇಳಿದರು.

‘ನೀರಿನ ಸಮಸ್ಯೆಯು ನಗರದಲ್ಲಿ ಬೃಹದಾಕಾರವಾಗಿ ಬೆಳೆದಿದೆ. ಕಾವೇರಿ ನದಿಯ ನೀರು ಶೇ 40 ಮನೆಗಳಿಗೆ ತಲುಪಿಲ್ಲ. ಆದರೆ, ನೀರಿನ ಸಂಪರ್ಕವನ್ನು ಕಲ್ಪಿಸುವ ಕೊಳವೆಗಳು ಸೋರುವುದ-ರಿಂದ ರಸ್ತೆಗಳಲ್ಲಿ, ಎಲ್ಲೆಂದರಲ್ಲಿ ನೀರು ಹರಿದು ಪೋಲಾಗುತ್ತಿದೆ. ಇವುಗಳಿಗೆ ಮೊದಲು ತುರ್ತು ಕ್ರಮ ಕೈಗೊಳ್ಳಬೇಕಾಗಿದೆ’ ಎಂದರು.

ಬಿ ಪ್ಯಾಕ್‌ ಸಂಘಟನೆಯ ಕಾರ್ಯ-ದರ್ಶಿ ಕೆ.ಜೈರಾಜ್‌, ‘ಬೆಂಗಳೂರನ್ನು ಸುಂದರ  ಮತ್ತು ಸುಸ್ಥಿರ ನಗರವನ್ನಾಗಿ ಪರಿವರ್ತಿಸುವುದು ಇಂದು ಒಂದು ದೊಡ್ಡ ಸವಾಲಾಗಿದೆ. ಇದಕ್ಕಾಗಿ ಸರ್ಕಾರ, ಕೈಗಾರಿಕೋದ್ಯಮಿಗಳು ಹಾಗೂ ಸಾರ್ವಜನಿಕರು ಭಾಗಿಯಾಗ-ಬೇಕಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.