ADVERTISEMENT

1,500 ಮಂದಿಗೆ ತಪಾಸಣೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2016, 19:30 IST
Last Updated 20 ಜುಲೈ 2016, 19:30 IST
1,500 ಮಂದಿಗೆ ತಪಾಸಣೆ
1,500 ಮಂದಿಗೆ ತಪಾಸಣೆ   

ಬೆಂಗಳೂರು: ವಾಸವಿ ಕ್ಲಬ್ ಇಂಟರ್‌ನ್ಯಾಷನಲ್ (ಜಿಲ್ಲೆ-ವಿ 301ಎ) ಆಯೋಜಿಸಿದ್ದ ಎರಡು ದಿನಗಳ ಆರೋಗ್ಯ ತಪಾಸಣಾ ಶಿಬಿರದಲ್ಲಿ 1,500ಕ್ಕೂ ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು.

ಕಿಮ್ಸ್ ಆಸ್ಪತ್ರೆ, ವಿ.ಎಸ್. ಡೆಂಟಲ್ ಕೇರ್, ಥೈರೋಕೇರ್, ಒಕ್ಕಲಿಗರ ಸಂಘ ಡೆಂಟಲ್ ಕಾಲೇಜು ಮತ್ತು ಅಪೊಲೊ ಆಸ್ಪತ್ರೆಯ ಸಹಯೋಗದಲ್ಲಿ ವಿ.ವಿ. ಪುರಂನ ಆದಿಲಕ್ಷ್ಮಮ್ಮ ಕನ್‌ವೆನ್ಷನ್ ಹಾಲ್‌ನಲ್ಲಿ ಶಿಬಿರ ನಡೆಯಿತು. ತಜ್ಞ ವೈದ್ಯರು ಹೃದಯ ಸಂಬಂಧಿ ಕಾಯಿಲೆ, ಬಿಪಿ, ಇಸಿಜಿ, ಎಕೋ, ಶುಗರ್‌, ಆರ್ಥೋಪೆಡಿಕ್ಸ್, ನರರೋಗ, ಥೈರಾಯಿಡ್, ಸ್ತ್ರೀರೋಗ ಹಾಗೂ ಮಕ್ಕಳ ಆರೋಗ್ಯ ತಪಾಸಣೆ ನಡೆಸಿದರು.

ರಾಜೀವ್‌ ಗಾಂಧಿ ಆರೋಗ್ಯ  ವಿಜ್ಞಾನಗಳ ವಿ.ವಿ ಕುಲಪತಿ ಡಾ. ಕೆ.ಎಸ್. ರವೀಂದ್ರನಾಥ್ ಮಾತನಾಡಿ, ‘ನಗರದಲ್ಲಿ ವಾತಾವರಣ ಕಲುಷಿತಗೊಳ್ಳುತ್ತಿದೆ. ಜನರು ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದು, ಗುಣಮಟ್ಟದ ಆರೋಗ್ಯ ಸೇವೆ ಒದಗಿಸಬೇಕಿದೆ’ ಎಂದರು.

ಕಾರ್ಯಕ್ರಮದ ಆಯೋಜಕ ಗೋಪಾಳಂ ಸುನೀಲ್, ‘ಇದೇ ಮೊದಲ ಬಾರಿಗೆ ದಂತ ತಪಾಸಣೆಗೆಂದು ₹ 2 ಕೋಟಿ ಮೌಲ್ಯದ ವಿಶೇಷ ಸರ್ಜಿಕಲ್ ಬಸ್ ಬಳಸಲಾಗಿದೆ. ಕಣ್ಣಿನ ತಪಾಸಣೆಗೆ ಒಳಗಾದವರ ಪೈಕಿ 20 ಮಂದಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದ್ದು, ಅವರಿಗೆ ವಾಸವಿ ಕ್ಲಬ್ ವತಿಯಿಂದ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.