ADVERTISEMENT

66 ಎಕರೆ ಸರ್ಕಾರಿ ಭೂಮಿ ಒತ್ತುವರಿ ತೆರವು

​ಪ್ರಜಾವಾಣಿ ವಾರ್ತೆ
Published 31 ಜನವರಿ 2015, 20:12 IST
Last Updated 31 ಜನವರಿ 2015, 20:12 IST

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯಲ್ಲಿ ಶನಿವಾರ ಜಿಲ್ಲಾಧಿಕಾರಿ ವಿ.ಶಂಕರ್‌ ನೇತೃತ್ವದ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ರೂ85.50 ಕೋಟಿ ಮೌಲ್ಯದ 66.17 ಎಕರೆ ಸರ್ಕಾರಿ ಭೂಮಿ ಒತ್ತುವರಿ ತೆರವು ಮಾಡಿದೆ.

ಯಲಹಂಕ ತಾಲ್ಲೂಕಿನ ಹೆಸರಘಟ್ಟ ಹೋಬಳಿಯ ಕಡತನಮಲೆ ಗ್ರಾಮದ ಸರ್ವೆ ನಂ. 20 ರಲ್ಲಿ 74 ಎಕರೆ 20 ಗುಂಟೆ ಪ್ರದೇಶದಲ್ಲಿ ಕೆರೆ ಇದೆ. ಇದರ 48 ಎಕರೆ ಜಾಗವನ್ನು ಶಿವರುದ್ರಯ್ಯ,  ಬಚ್ಚೇಗೌಡ, ಸಂಜೀವಯ್ಯ, ಪಾಪಣ್ಣ ಎಂಬವರು ಒತ್ತುವರಿ ಮಾಡಿ­ಕೊಂಡಿದ್ದರು. ತಹಶೀಲ್ದಾರ್‌ ಬಾಳಪ್ಪ ಹಂದಿಗುಂದ ನೇತೃತ್ವದ ತಂಡ ಒತ್ತುವರಿ ತೆರವು ಮಾಡಿದೆ. ಇದರ ಮೌಲ್ಯ ರೂ30 ಕೋಟಿ.
ಬೆಂಗಳೂರು ದಕ್ಷಿಣ ತಾಲ್ಲೂಕಿನ ರೂ5 ಕೋಟಿ ಮೌಲ್ಯ, ಪೂರ್ವ ತಾಲ್ಲೂಕಿನಲ್ಲಿ ರೂ45 ಕೋಟಿ ಮೌಲ್ಯ, ಆನೇಕಲ್‌ ತಾಲ್ಲೂಕಿನಲ್ಲಿ ರೂ5.50 ಕೋಟಿ ಮೌಲ್ಯದ ಸರ್ಕಾರಿ ಭೂಮಿ ಒತ್ತುವರಿಯನ್ನು ತೆರವು ಮಾಡಲಾಯಿತು.

ನಾಲ್ಕೂ ತಾಲ್ಲೂಕುಗಳಲ್ಲಿ ನಡೆದ ತೆರವು ಕಾರ್ಯಾಚರಣೆಗೆ ವಿಭಾಗಾಧಿ­ಕಾರಿಗಳು, ಬಿಎಂಟಿಎಫ್ ಅಧಿಕಾರಿ­ಗಳು, ಪೊಲೀಸ್‌ ಅಧಿಕಾರಿಗಳು ನೆರವು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.