ADVERTISEMENT

‘ಅಂಬೇಡ್ಕರ್ ಆದರ್ಶ ಪಾಲನೆಯಾಗಲಿ’

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2018, 6:26 IST
Last Updated 16 ಏಪ್ರಿಲ್ 2018, 6:26 IST

ಬಸವಕಲ್ಯಾಣ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಆದರ್ಶ ಪಾಲನೆ ಮಾಡಿದರೆ ದೇಶದ ಉದ್ಧಾರ ಸಾಧ್ಯ' ಎಂದು ಹಿರಿಯ ದಲಿತ ಮುಖಂಡ ಪ್ರಹ್ಲಾದ್ ಮೋರೆ ಹೇಳಿದರು.

ತಾಲ್ಲೂಕಿನ ಹುಲಸೂರನಲ್ಲಿ ಶನಿವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಲ್ಲಿ ಅವರು ಮಾತನಾಡಿ, `ಸಮಾಜದಲ್ಲಿ ಸಮಾನತೆ, ಶಾಂತಿ ಅವಶ್ಯಕತೆಯಿದೆ. ಅದಕ್ಕಾಗಿ ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವದ ಪಾಲನೆ ಅಗತ್ಯವಾಗಿದೆ. ದಲಿತರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಿ ಅಭಿವೃದ್ಧಿ ಹೊಂದಬೇಕು' ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಸುಧೀರ ಕಾಡಾದಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಮಲ್ಲಪ್ಪ ಧಬಾಲೆ, ಶಾಲುಬಾಯಿ ಬನ್ಸೂಡೆ, ತಾಲ್ಲೂಕು ಪಂಚಾಯಿತಿ ಸದಸ್ಯ ಗೋವಿಂದರಾವ್ ಸೋಮವಂಶಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಾ ಡೊಣಗಾಪುರೆ, ರಾಮರಾವ್ ಮೋರೆ ಮುಂತಾದವರು ಪಾಲ್ಗೊಂಡಿದ್ದರು.

ADVERTISEMENT

ಪಟ್ಟಣದ ತ್ರಿಪುರಾಂತ ಓಣಿಯಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಜಯಂತಿ ಆಚರಿಸಲಾಯಿತು. ಹಿರಿಯರಾದ ಜ್ಞಾನದೇವ ಗುರೂಜಿ ಮೂರ್ತಿಗೆ ಪೂಜೆ ಸಲ್ಲಿಸಿದರು. ಸಂಜೀವ ಗಾಯಕವಾಡ, ವಿಜಯಕುಮಾರ ಡಾಂಗೆ, ನಗರಸಭೆ ಸದಸ್ಯ ನಾಗಪ್ಪ ಚಾಮಾಲೆ, ಕಾಳಿದಾಸ ಜಾಧವ, ದೀಲಿಪ ಮಡ್ಡೆ, ಅನಿಲ ಹಲಶೆಟ್ಟೆ ಇದ್ದರು.

ತಾಲ್ಲೂಕಿನ ಕೊಹಿನೂರನಲ್ಲಿ ನಡೆದ ಡಾ.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅಂಬಾರಾಯ ಉಗಾಜಿ ಮೂರ್ತಿಗೆ ಪೂಜೆ ಸಲ್ಲಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಆನಂದ ಪಾಟೀಲ, ಶಿವಾನಂದ ತೋಬರೆ, ಶಾಂತಪ್ಪ ಭೂತೆ ಮಾತನಾಡಿದರು.

ಶರಣಬಸವ ಭೂತೆ, ದೇವಿದಾಸ ಸಜ್ಜನ, ಅಶೋಕ ತೋಬರೆ, ಮಹಾದೇವ ಬಿಲಗುಂದಿ, ರಾಜೇಂದ್ರ ಗಡ್ಡದ, ಡಾ.ಅಮರನಾಥ
ಜಮಾದಾರ, ವೀರಣ್ಣ ಮೂಲಗೆ, ವಿಜಯಕುಮಾರ, ಆಕಾಶ, ಪ್ರಕಾಶ ಗೋಯೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.