ADVERTISEMENT

‘ಅಪರಾಧ ನಿಯಂತ್ರಣಕ್ಕೆ ನಾಗರಿಕರ ಸಹಕಾರ ಮುಖ್ಯ’

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 5:41 IST
Last Updated 18 ಜುಲೈ 2017, 5:41 IST

ಚಿಟಗುಪ್ಪ: ‘ದೈನಂದಿನ ಅಪರಾಧಗಳನ್ನು ತಡೆಯಲು ಪೊಲೀಸ್ ಸಿಬ್ಬಂದಿ ಜತೆಗೆ ನಾಗರಿಕರು ಸಹಕರಿಸಬೇಕು. ಸ್ವಯಂ ಪ್ರೇರಣೆಯಿಂದ ಅಪರಾಧ ಮುಕ್ತ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಶ್ರಮಿಸಬೇಕು’ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಹೇಳಿದರು. ಪಟ್ಟಣ ಠಾಣೆಯಲ್ಲಿ ಈಚೆಗೆ ನಡೆದ ಸುಧಾರಿತ ಗಸ್ತು ನಾಗರಿಕ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಗ್ರಾಮದ ನಾಗರಿಕರ ಸಮಿತಿ ಪದಾಧಿಕಾರಿಗಳು ಗ್ರಾಮಗಳಲ್ಲಿ ನಡೆಯುವ ಅಹಿತಕರ ಘಟನೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಅಪರಾಧ ನಡೆಯುವ ಮುನ್ನ ತಡೆಯುವ ಕೆಲಸ ಮಾಡಬೇಕು. ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಚೋದನಕಾರಿ ಕೆಲಸ ಮಾಡುವವರ ಬಗ್ಗೆ  ಪೊಲೀಸರಿಗೆ ಮಾಹಿತಿ ನೀಡಬೇಕು’ ಎಂದು ನುಡಿದರು.

ಸರ್ಕಲ್‌ ಇನ್‌ಸ್ಪೆಕ್ಟರ್‌ ಬಿ.ಬಿ.ಪಟೇಲ್, ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಮಹಾಂತೇಶ್,  ಎಎಸ್ಐ ದೇವಿಂದ್ರಪ್ಪ, ಪುರಸಭೆ ಮಾಜಿ ಅದ್ಯಕ್ಷ ಬಾಬಾ ಬುಖಾರಿ, ಪುರಸಭೆ ಸದಸ್ಯರಾದ ಭೀಮಣ್ಣ ಶಾಖಾ, ಮಲ್ಲಿಕಾರ್ಜುನ ಪಾಟೀಲ್, ಮುಖಂಡ ಸೂರ್ಯಕಾಂತ ಮಠಪತಿ ಹಾಜರಿದ್ದರು. ಬೆಳಕೇರಾ, ಕುಡಂಬಲ್, ಇಟಗಾ, ವಳಖಿಂಡಿ, ರಾಮಪುರ್, ಉಡಬಾಳ್ ಗ್ರಾಮಗಳ   ಪದಾಧಿಕಾರಿಗಳು  ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.